DHARWADPolitical newsಅಣ್ಣಿಗೇರಿ

ಅಂದು “ಹಿಜಾಬ್”ವಿರೋಧ ಇಂದು ಹಿಜಾಬ್‌ಧಾರಿ ಮಹೀಳೆಗೆ ಸನ್ಮಾನ ಕಾಂಗ್ರೆಸ್ ಗೆ ಶಾಕ್ ಕೊಟ್ಟ ಜೋಷಿ!

ಅಣ್ಣಿಗೇರಿ ಪುರಸಭೆ ಅಧ್ಯಕ್ಷರಿಗೆ ಸನ್ಮಾನ!

POWERCITY NEWS : HUBBALLI

ಹುಬ್ಬಳ್ಳಿ : ಇಂದು ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೇಸ್ಸಿನ ಅಧಿಕೃತ ಅಭ್ಯರ್ಥಿ ಸೋತು ಹಾಲಿ ಶಾಸಕ ಎನ್ ಎಚ್ ಕೊನರೆಡ್ಡಿಗೆ ತೀವ್ರ ಮುಖಭಂಗವಾಗಿರುವುದು ಒಂದು ಕಡೆಯಾದರೆ.

ಇತ್ತ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ಬೆಂಬಲದೊಂದಿಗೆ ಇಸ್ಲಾಂ ಧರ್ಮದ ಸಾಂಪ್ರದಾಯಿಕ ಹಿಜಾಬ್ ತೊಟ್ಟು ರಾಜಕೀಯದಲ್ಲಿ ಮುನ್ನುಗ್ಗುತ್ತಿರುವ ಮುಸ್ಲಿಂ ಸಮಾಜದ ಮೆಹಬೂಬಿ ನವಲಗುಂದ ಅಲ್ಪ ಸಂಖ್ಯಾತರ ವಿರೋಧಿ ಎನಿಸಿಕೊಂಡಿರುವ ಬಿಜೆಪಿ ಬೆಂಬಲದೊಂದಿಗೆ ಜಯಭೇರಿ ಬಾರಿಸಿದ್ದಾರೆ.

ಇ ಹಿನ್ನಲೆಯಲ್ಲಿ ಇಂದು ಅಧ್ಯಕ್ಷರಾಗಿ ಆಯ್ಕೆಗೊಂಡ ಮೆಹಬೂಬೀ ಹಾಗೂ ಅಣ್ಣಿಗೆರಿಯ ಹಿರಿಯರು ವಿಮಾನ ನಿಲ್ದಾಣದಲ್ಲಿ ಕೇಂದ್ರ ಬಿಜೆಪಿ ಸಚಿವ ಪ್ರಲ್ಹಾದ ಜೋಶಿ ಅವರನ್ನ ಬೇಟಿ ಮಾಡಿದ್ದಾರೆ. ಈ ವೇಳೆ ಸಚಿವರು ಅಲ್ಪ ಸಂಖ್ಯಾತ ನಾಯಕಿಗೆ ಸನ್ಮಾನಿಸಿ ಗೌರವಿಸುವ ಮೂಲಕ ರಾಜಕೀಯ ಎಲ್ಲರಿಗೂ ಒಂದೆ ಎಂದು ತೊರಿಸಿದ್ದಾರೆ.

ಇನ್ನೂ ವಿಧಾನಸಭೆ ಪೂರ್ವದಲ್ಲಿ ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ನಾಯಕರು ಹಿಜಾಬ್ ವಿಚಾರದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿ ರಾಜಕೀಯ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದೀಗ ಇ ಭಾಗದ ಕಾಂಗ್ರೆಸ್ ಶಾಸಕ ಕೊನರೆಡ್ಡಿಯವರ ಪ್ರಭಾವ ಎನೂ ಇಲ್ಲದಂತಾಗಿದೆ. ಇನ್ನೂ ಸೈದ್ಧಾಂತಿಕವಾಗಿ ಬಿಜೆಪಿ ಪಕ್ಷ ಕಾಂಗ್ರೆಸ್ ಪಕ್ಷದ ಜೊತೆಗೆ ಪುರಸಭೆ ಮಟ್ಟದಲ್ಲಿ ರಾಜಿ ಮಾಡಿಕೊಂಡಿರುವುದು ಸಂಚಲನ ಮೂಡಿಸಿದ್ದು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅಲ್ಪ ಸಂಖ್ಯಾತರ ಓಲೈಕೆಗೆ ಹಿಂದುತ್ವವಾದಿ ನಾಯಕರು ಮುಂದಾಗವರೆ ಎನ್ನುವುದನ್ನು ಕಾದು ನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button