
POWERCITY NEWS : HUBBALLI
ಹುಬ್ಬಳ್ಳಿ/ಕುಂದಗೋಳ : ಯುವಕನೋರ್ವ ಸಾಮಾಜಿಕ ಜಾಲತಾಣದ ಇನ್ಸ್ಟಾಗ್ರಾಮ್ ಮುಖಪುಟದಲ್ಲಿನ ಪೋಸ್ಟ್‌ಗೆ ಸಂಭಂದಿಸಿದ ಸನ್ನಿವೇಶವೊಂದಕ್ಕೆ ದಲಿತರ ಕುರಿತು ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ಘಟನೆಗೆ ಸಂಬಂಧಿಸಿದಂತೆ ಕುಂದಗೋಳ ಪೊಲಿಸ್ ಠಾಣೆಯಲ್ಲಿ ಯುವಕನೊಬ್ಬನ ಮೇಲೆ ಪ್ರಕರಣ ದಾಖಲಾಗಿದೆ.

ಬಂದಿತ ಯುವಕನನ್ನು ಕುಂದಗೋಳ ತಾಲೂಕಿನ ಚಿಕ್ಕಗುಂಜಳ ನಿವಾಸಿ ಎಂದು ಹೇಳಲಾಗಿದ್ದು.ದಲಿತರ ಕುರಿತು ಅವಹೇಳನಕಾರಿ ಸಾಮಾಜಿಕ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಆತನನ್ನು ಬಂದಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಬಿದಿಗಿಳಿದ ದಲಿತ ವಿಮೋಚನಾ ಸಮಿತಿ ಹಾಗೂ ದಲಿತಪರ ಸಂಘಟನೆಗಳು ಇತ್ತೀಚಿನ ದಿನಗಳಲ್ಲಿ ದಲಿತ ಸಮಾಜವನ್ನೆ ಗುರಿಯಾಗಿಸಿಕೊಂಡು ಪದೆ ಪದೆ ಕೆಲ ರಾಜಕೀಯ ಪುಂಡರ ಕುಮ್ಮಕ್ಕಿನಿಂದ ಅಸಹ್ಯಕರವಾಗಿ ನಡೆದು ಕೊಳ್ಳುವುದಲ್ಲದೆ ಅತ್ಯಂತ ಹೀನವಾಗಿ ಕಾಣುತ್ತಿದ್ದಾರೆ ಎಂದು ಆರೋಪಿಸಿದರು. ಸುಶಿಕ್ಷಿತ ಪ್ರಜ್ಙಾವಂತರ ಜಿಲ್ಲೆಯಲ್ಲಿ ದಲಿತ ಸಮುದಾಯದ ಮೇಲೆ ಮುಗಿಬಿಳುತ್ತಿರುವ ಇಂತಹ ಹೇಡಿಗಳಿಗೆ ಕಾನೂನಾತ್ಮಕವಾಗಿ ಶಿಕ್ಷೆಯಾಗುವಂತೆ ಪೊಲಿಸ್ ಇಲಾಖೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಇ ಸಂದರ್ಭದಲ್ಲಿ ಅಶೋಕ,ಉಮೇಶ ಮಾದರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
