Jannah Theme License is not validated, Go to the theme options page to validate the license, You need a single license for each domain name.
BREAKING NEWSPolicePolitical news

ಕೋರ್ಟ್‌ನಿಂದ ತರಾಟೆ: ರೈತ ನಾಯಕ ಕೊಡಿಹಳ್ಳಿ ಚಂದ್ರಶೇಖರ್ ಜೈಲಿಗೆ!

Dakhani

POWER CITYNEWS : HUBBALLI/ಹುಬ್ಬಳ್ಳಿ: ಪ್ರಮುಖ ರೈತ ಹೋರಾಟಗಾರ ಕೊಡಿಹಳ್ಳಿ ಚಂದ್ರಶೇಖರ್ ಅವರಿಗೆ ಹುಬ್ಬಳ್ಳಿಯ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ (JMFC) ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ನ್ಯಾಯಾಧೀಶರಾದ ಸಚಿನ್ ಕುಮಾರ್ ಶಿವಪೂಜೆ ಅವರು ಈ ಮಹತ್ವದ ತೀರ್ಪು ನೀಡಿದ್ದಾರೆ.

​ಪ್ರಕರಣದ ವಿವರ:

2013ರಲ್ಲಿ ನಡೆದಿದ್ದ ಪ್ರಸಿದ್ಧ ಕಳಸಾ-ಬಂಡೂರಿ ಹೋರಾಟದ ಸಮಯದಲ್ಲಿ ರೈಲು ತಡೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ವೇಳೆ ಕೊಡಿಹಳ್ಳಿ ಪರ ವಕೀಲರು ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.

​ನ್ಯಾಯಾಧೀಶರ ತರಾಟೆ:

ವಿಚಾರಣೆ ವೇಳೆ ಕೊಡಿಹಳ್ಳಿ ಚಂದ್ರಶೇಖರ್ ಅವರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ನ್ಯಾಯಾಲಯದ ಕಟ್ಟಳೆಗಳನ್ನು ಪಾಲಿಸದ ಬಗ್ಗೆ ಕ್ಲಾಸ್ ತೆಗೆದುಕೊಂಡರು.

​“ನ್ಯಾಯಾಲಯವು ಎಲ್ಲ ಹೋರಾಟಗಾರರನ್ನು ಗೌರವದಿಂದ ಕಾಣುತ್ತದೆ. ಅದೇ ರೀತಿ ಹೋರಾಟಗಾರರು ಸಹ ಕಾನೂನು ಮತ್ತು ನ್ಯಾಯಾಲಯಕ್ಕೆ ಗೌರವ ನೀಡಬೇಕು. ಕಾನೂನನ್ನು ಗೌರವಿಸದವರು ನಿಜವಾದ ಹೋರಾಟಗಾರರಾಗಲು ಸಾಧ್ಯವಿಲ್ಲ. ನೀವು ಈ ಪ್ರಕರಣದಲ್ಲಿ 2019ರಿಂದಲೂ ವಿಚಾರಣೆಗೆ ಹಾಜರಾಗಿಲ್ಲ. ಈಗ ಮತ್ತೆ ನಿಮಗೆ ಜಾಮೀನು ನೀಡಿದರೆ ಮುಂದಿನ ಐದು ವರ್ಷಗಳ ಕಾಲ ಕೋರ್ಟ್‌ಗೆ ಹಾಜರಾಗುವುದಿಲ್ಲ,” ಎಂದು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದಿದೆ.

​ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯವು, ಅವರನ್ನು ಅಕ್ಟೋಬರ್ 9ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.

Related Articles

Leave a Reply

Your email address will not be published. Required fields are marked *