ನಿರ್ಮಾಣ ಹಂತದ ಕಟ್ಟಡದಲ್ಲಿ ಯುವಕನ ಬರ್ಬರ ಕೊಲೆ!
CRIME CITY NEWS

POWERCITY NEWS : HUBBALLI
ಹುಬ್ಬಳ್ಳಿ : ಕೆಲಸ ಅರಸಿ ತುತ್ತಿನ ಚೀಲ ತುಂಬಿಸಿಕೊಳಲು ಬಂದಿದ್ದ ಯುವಕನೋರ್ವ ಬೆಳಕಾಗುವಷ್ಟರಲ್ಲಿ ಬರ್ಬರ ವಾಗಿ ಕೊಲೆಯಾದ ಘಟನೆ ಗೊಕುಲ ರಸ್ತೆಯ ಡೆಫೊಡಿಲ್ಸ್ ಸ್ಕೂಲ್ ಎದುರಿನ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿದೆ.
ಕೊಲೆಯಾದ ದುರ್ದೈವಿಯನ್ನು ಮುಂಡಗೋಡ ತಾಲ್ಲೂಕಿನ ಮರಗಡ ಗ್ರಾಮದ ಮೌಲಾಲಿ ನಜಿರಸಾಬ್ ಮುಲ್ಲಾ (೨೩) ಎಂದು ಗುರುತಿಸಲಾಗಿದೆ.

ಹುಬ್ಬಳ್ಳಿಯ ರಾಯ್ನಾಳ ಮೂಲದ ಶೋಹೇಬ್ ಎಂಬ ಮೇಸ್ತ್ರಿ ಬಳಿ ವಿಶ್ವಾಸಿಕನಾಗಿ ದುಡಿಯುತ್ತಿದ್ದನು ಎನ್ನಲಾಗಿದೆ. ಕಳೆದ ಮೂರು ತಿಂಗಳಿನಿಂದ ಕಟ್ಟಡ ಕಟ್ಟುವ ಕಟ್ಟಡದಲ್ಲೆ ವಾಸ್ತವ್ಯ ಹೂಡಿದ್ದ ಮೌಲಾಲಿ ಹಾಗೂ ಆತನ ಸಹೋದರನು ಕೂಡ ಕೊಲೆಗೂ ಎರಡು ದಿನಗಳ ಹಿಂದೆ ಮೌಲಾಲಿ ಜೊತೆಯೆ ಇದ್ದ ಎನ್ನಲಾಗಿದೆ.
ಬಿಜಾಪುರ ಮೂಲದ ಯುವತಿಯೊಂದಿಗೆ ಇನ್ನೇರಡು ತಿಂಗಳಲ್ಲಿ ಮದುವೆಯೂ ಕೂಡ ನಿಶ್ಚಯವಾಗಿತ್ತು ಎನ್ನಲಾಗಿದೆ.
ಕೊಲೆಯಾಗುವ ಮುನ್ನಾದಿನ ಈದ್-ಮಿಲಾದ್ ಹಬ್ಬದ ಕುರಿತು ಮನೆಗೆ ಸಂತೆ ಮಾಡಿಕೊಂಡು ಊರಿಗೆ ಹೋಗುವ ಭರದಲ್ಲಿದ್ದ ಎನ್ನಲಾಗಿದೆ.
ಇನ್ನೂ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಅವಳಿನಗರದ ಪೊಲಿಸ್ ಆಯುಕ್ತರು ಹಾಗೂ ಗೋಕುಲ ರೋಡ್ ಪೊಲಿಸ್ ಠಾಣೆಯ ಪೊಲಿಸರು ಹಾಗೂ ಬೆರಳಚ್ಚು ತಜ್ಞರು ಭೇಟಿ ನಿಡಿದ್ದು, ಘಟನೆಯ ಕುರಿತು ಮಾಹಿತಿ ಕಲೆಹಾಕುತ್ತಿದ್ದು ಕೊಲೆ ಆರೋಪಿಗಳ ಪತ್ತೆಗೆ ಜಾಲ ಬಿಸಿದ್ದಾರೆ.
ಹೀಗೆ ದುಡಿಯೊಕೆ ಬಂದ ಬಡ ಯುವಕ ಇನ್ಯಾರದೊ ದುರುದ್ದೇಶಕ್ಕೆ ಬಲಿಯಾಗಿದ್ದು ಮಾತ್ರ ದೂರದೃಷ್ಟಕರ ಸಂಗತಿ ಯಾಗಿದೆ.
