CITY CRIME NEWSDHARWADHubballiPolitical news
ಚಿಗರಿ ಬಸ್ಸಿನ ಚಾಲಕನ ಚಳಿ ಬಿಡಿಸಿದ ಬೈಕ್ ಸವಾರ..!
POWER CITY NEWS

POWER CITY NEWS : HUBBALLI
ಹುಬ್ಬಳ್ಳಿ:ಚಿಗರಿ ಬಸ್ಸಿನ ಚಾಲನೆಗೆ ಬೇಸತ್ತು ಬೈಕ್ ಸವಾರನೊಬ್ಬ ರಸ್ತೆ ಮಧ್ಯದಲ್ಲಿಯೇ ಬಸ್ ಸೈಡ್ ಹಾಕಿಸಿ ಡ್ರೈವರ್ ನನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ ನಡೆದಿದೆ.
ಹೌದು..ಹುಬ್ಬಳ್ಳಿ ಧಾರವಾಡ ಅವಳಿನಗರದ ನಡುವೆ ತ್ವರಿತ ಸಾರಿಗೆ ಸೇವೆ ನೀಡಲು ಮುಂದಾಗಿರುವ ಚಿಗರಿ ಬಸ್ ಒಂದಿಲ್ಲೊಂದು ರೀತಿಯಲ್ಲಿ ಅವ್ಯವಸ್ಥೆ ಸೃಷ್ಟಿಸುತ್ತಲೇ ಇದೆ. ಅದ್ಯಾವುದೋ ಕಾರ್ಯನಿಮಿತ್ತ ಹೊರಟಿದ್ದ ಬೈಕ್ ಸವಾರನ ತಲೆಬಿಸಿ ಯಾಗಿದ್ದೆ ತಡ ನಡು ರಸ್ತೆಯಲ್ಲಿ ನಿಲ್ಲಿಸಿ ಚಿಗರಿ ಬಸ್ ಡ್ರೈವರ್ ನ್ನು ತರಾಟೆಗೆ ತೆಗೆದುಕೊಂಡು ಬೈಕ್ ಸವಾರ ಬಸ್ ಚಾಲಕನ ಮೈ ಛಳಿ ಬಿಡಿಸಿದ್ದಾನೆ.
ಇನ್ನೂ ಜನನಿಬಿಡ ಪ್ರದೇಶದಲ್ಲಿ ಕೂಡ ಸದ್ದಿಲ್ಲದೆ ವೇಗವಾಗಿ ಬಸ್ ಚಾಲನೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದರೂ ಪೊಲಿಸ್ ಇಲಾಖೆ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
