ಸೌಹಾರ್ದತೆಗೆ ಕಾರಣವಾಗಿದ್ದೆ ಆ ಮಾನವೀಯ ಗುಣವಂತ!
RAJA DAKHANI!

POWERCITY NEWS : HUBBALLI
ಹುಬ್ಬಳ್ಳಿ: ಹಳೆ ಹುಬ್ಬಳ್ಳಿ ಪೊಲಿಸ್ ಠಾಣೆಯ ಹಾಗೂ ಇಡೀ ಪೊಲಿಸ್ ಇಲಾಖೆಗೆ ಗೌರವ ಹೆಚ್ಚಿಸಿದ ಮತ್ತು “ಜನಸ್ನೇಹಿ ಪೊಲಿಸ್” ಅಭಿಯಾನಕ್ಕೆ ಸಾರ್ಥಕತೆ ಸಾಬೀತು ಪಡಿಸಿದ ಹಳೆ ಹುಬ್ಬಳ್ಳಿ ಪೊಲಿಸ್ ಠಾಣೆಯ ಸಿಬ್ಬಂದಿ ಗಳಲ್ಲಿ ಒಬ್ಬರಾಗಿದ್ದ ಬೀಟ್ ನಂಬರ್ 52ನ್ನು ನಿಭಾಯಿಸುತ್ತಿದ್ದ ಮೆಹಬೂಬ್ ನದಾಫ್ ಅವರ ಮಾರ್ಗದರ್ಶನ ದಂತೆ ಇಲ್ಲಿನ ಯುವಕರು ನಡೆದು ಕೊಂಡಿದ್ದಾರೆ. ಸದ್ಯಕ್ಕೆ ಮೆಹಬೂಬ್ ನದಾಫ್ ಬೇರೆ ಠಾಣೆಗೆ ವರ್ಗವಾಗಿದ್ದರು ಸಹ ಅಂದು ಹಿರಿಯ ಪೊಲಿಸ್ ಅಧಿಕಾರಿಗಳು ಹಾಕಿ ಕೊಟ್ಟ ಮಾರ್ಗದರ್ಶನದಂತೆ ನಿರ್ದೆಶಿಸಿ ಕಾನೂನು ಅರಿವು ಮೂಡಿಸಿದ್ದರ ಪರಿಣಾಮವಾಗಿ ಇಂದು ಇಲ್ಲಿನ ನಾಗರಿಕರು ನಡೆದು ಕೊಳ್ಳುತ್ತಿದ್ದಾರೆ.

ನಿಜ ಇದು ಛೋಟಾ ಬಾಂಬೆ,ಶ್ರೀ ಸಿಧ್ಧಾರೂಢರ ಬೀಡು ಎಂದೆನಿಸಿಕೊಂಡ ಹುಬ್ಬಳ್ಳಿ ಇದೀಗ ಹಿಂದೂ ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾಗಿದೆ.ಇದು ನಿಜಕ್ಕೂ ಸುತ್ತ-ಮುತ್ತಲಿನ ಪ್ರತ್ಯೇಕ ಜಾತಿ ವಾದಿಗಳಿಗೆ ಮಾರ್ಗದರ್ಶನವಾಗಿದೆ. ಇಂತಹ ಮಹತ್ವದ ಸಂದೇಶಕ್ಕೆ ಹಳೇ ಹುಬ್ಬಳ್ಳಿಯ ಆನಂದನಗರದ ಜನರು ಸಾಕ್ಷಿಯಾಗಿದ್ದಾರೆ.

ಹೌದು.. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುವ ನ್ಯೂ ಆನಂದನಗರದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಮತ್ತು ಸೌಹಾರ್ದತೆಯ ಅಂಗವಾಗಿ ಗಣೇಶ ಮೂರ್ತಿ ಪ್ರತಿಷ್ಠಾನದಿಂದ ಹಿಡಿದು ವಿಸರ್ಜನೆಯ ದಿನದವರೆಗೂ ಇಲ್ಲಿನ ಹಿಂದೂ ಮುಸ್ಲಿಂ ಜನತೆ ಅನ್ಯೋನ್ಯವಾಗಿ ಸ್ನೇಹ ಬಾಂಧವ್ಯದಿಂದ ಹಬ್ಬ ಆಚರಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

ಇನ್ನೂ ಪೊಲಿಸ್ ಸಿಬ್ಬಂದಿ ಮೆಹಬೂಬ್ ನದಾಫ್ ಅವರು ಹಾಕಿ ಕೊಟ್ಟ ಸನ್ಮಾರ್ಗದಂತೆ ಇಲ್ಲಿನ ಯುವ ಜನತೆ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿಯೆ ಇಸ್ಲಾಂ ಧರ್ಮದ ಹಾಗೂ ಹಿಂದೂ ಧರ್ಮದ ಪವಿತ್ರ ಭಾವುಟಗಳನ್ನು ಹಿಡಿದುಕೊಂಡು ಪರಸ್ಪರ ಆತ್ಮೀಯತೆಯಿಂದಲೇ ಆಚರಣೆ ಮಾಡುವ ಮೂಲಕ ಸೌಹಾರ್ದತೆ ಸಾಕ್ಷಿಯಾಗಿದ್ದಾರೆ.
