ಎರಡು ಸಾವಿನ ಸುತ್ತ ಅನುಮಾನದ ಹುತ್ತ!
ನಿನ್ನೆ ಕೊಲೆ ! ಇಂದು ಆತ್ಮಹತ್ಯೆ !
ಹುಬ್ಬಳ್ಳಿ: ವ್ಯಕ್ತಿಯೊರ್ವ ರಸ್ತೆ ಬದಿಯ ಮರವೊಂದಕ್ಕೆ ನೆಣಿಗೆ ಶರಣಾದ ಘಟನೆ ನಗರದ ಗೋಕುಲ ರಸ್ತೆಯ ಅಪೂರ್ವ ನಗರದ ಬಳಿ ನಡೆದಿದೆ.
ಮೃತನನ್ನು ಪರಸಪ್ಪ (53) ಎಂದು ಗುರುತಿಸಲಾಗಿದ್ದು ಈತ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಲ್ಲಿ ವಾಚ್‌ಮೆನ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಅನುಮಾನ :
ನಿನ್ನೆಯಷ್ಟೆ ಮುಂಡಗೋಡ ಮೂಲದ ಯುವಕ ಮೌಲಾಲಿ ಮುಲ್ಲಾ ಕೂಡ ಇದೆ ನಿರ್ಮಾಣ ಹಂತದಲ್ಲಿನ ಕಟ್ಟಡದಲ್ಲಿ ಬರ್ಬರವಾಗಿ ಕೊಲೆಯಾಗಿದ್ದ.ಇನ್ನೂ ಇದೆ ನಿರ್ಮಾಣ ಹಂತದ ಕಟ್ಟಡಕ್ಕೆ ಇದೀಗ ನೆಣಿಗೆ ಶರಣಾಗಿರುವ ಪರಸಪ್ಪ ಕೂಡ ವಾಚ್‌ಮೆನ್ ಆಗಿ ಕೆಲಸ ಮಾಡುತ್ತಿದ್ದ.
ಮೌಲಾಲಿಯ ಕೊಲೆಯ ಕುರಿತು ಗೋಕುಲ ರೋಡ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲಿಸರು ತನಿಖೆ ಕೈಗೊಂಡ ಬೆನ್ನಲ್ಲೇ ವಾಚಮೆನ್ ಪರಸಪ್ಪ ಆತ್ಮಹತ್ಯೆಗೆ ಶರಣಾಗಿದ್ದು ಇದೀಗ ಪ್ರಕರಣ ಸಾಕಷ್ಟು ಕುತೂಲ ಕೆರಳಿಸಿದೆ.
ಕೊಲೆಯಾದ ಮೌಲಾಲಿಯ ಸಹೋದರ ಜಾಫರ್ ಮಾಧ್ಯಗಳೊಂದಿಗೆ ಮಾತನಾಡುವಾಗ ತನ್ನ ಸಹೋದರನ ಕೊಲೆಯ ಕುರಿತು ಇದೆ ವಾಚಮೆನ್ ಪರಸಪ್ಪನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.
ಒಟ್ಟಾರೆ ಎರಡು ಸಾವಿನ ಘಟನೆಯ ಕುರಿತು ಪೊಲೀಸರ ತನಿಖೆಯಿಂದಷ್ಟೆ ಸತ್ಯ ಹೊರ ಬಿಳಬೇಕಿದೆ.
: