Festival Ganesh chaturthiಸ್ಥಳೀಯ ಸುದ್ದಿಹುಬ್ಬಳ್ಳಿ

ಶ್ರೀ ಸಿದ್ಧಾರೂಢ ಮಠದಲ್ಲಿ ವಿಜೃಂಭಿಸಿದ ಶ್ರಾವಣ ಮಾಸದ ಮಂಗಲೋತ್ಸವ ಕಾರ್ಯಕ್ರಮ!

POWERCITY NEWS : hubballi

ಹುಬ್ಬಳ್ಳಿ: ತಾಲೂಕಿನ ಸುಳ್ಳ ಗ್ರಾಮದ ಶ್ರೀ ಸಿದ್ದಾರೂಢರ ಮಠದಲ್ಲಿ ಸದ್ಗುರು ಸಿದ್ದಾರೂಢ ಮಹಾತ್ಮೆಯ ಮಂಗಲ ಮಹೋತ್ಸವ ಶುಕ್ರವಾರ ಅದ್ದೂರಿಯಾಗಿ ಜರುಗಿತು.

ಶ್ರೀ ರಾಮಾನಂದ ಭಾರತಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಸೆ.17 ರಿಂದ ಸೆ.22 ರವರೆಗೆ ಶ್ರೀ ಸಿದ್ದಾರೂಢರ ಮಹಾತ್ಮೆ ಪ್ರವಚನ ನಡೆಯಿತು.

ಶುಕ್ರವಾರ ಮಹಾ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು. ಈ ವೇಳೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಯಿತು. ಇದಕ್ಕೆ ಭಜನಾ ಮೇಳಗಳು, ಡೊಳ್ಳಿನ ಮೇಳ, ಬೆಂಡಿನ ಮೇಳ, ಕರಡಿ ಮಜಲು, ಝಾಂಜಿನ ಮೇಳ ಸೇರಿದಂತೆ ಮುಂತಾದ ವಾದ್ಯ ಮೇಳಗಳು ಉತ್ಸವಕ್ಕೆ ಮತ್ತಷ್ಟು ಮೆರಗು ನೀಡಿದವು.

ಅಂತಿಮವಾಗಿ ಶ್ರೀ ಸದ್ಗುರು ಶಿವಾನಂದ ಭಾರತಿ ಮಹಾಸ್ವಾಮಿಗಳು ಸುವರ್ಣ ಕಿರೀಟ ಪೂಜೆಯೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.

Related Articles

Leave a Reply

Your email address will not be published. Required fields are marked *

Back to top button