Jannah Theme License is not validated, Go to the theme options page to validate the license, You need a single license for each domain name.
ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಪ್ರೀತಿಗೆ ತಲೆ ಬಾಗಿದ್ದವಳ ತಲೆಗೆ ವಾರದಲ್ಲೆ ಬಿತ್ತು ಕೊಡಲಿ ಏಟು!

Power city news ಹುಬ್ಬಳ್ಳಿ: ಪತಿಯೇ ಪತ್ನಿಯ ತಲೆಗೆ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸೋಮವಾರ ಬೆಳಗ್ಗೆ ಹಳೇಹುಬ್ಬಳ್ಳಿ ಆನಂದನಗರದ ಬ್ಯಾಹಟ್ಟಿ ಪ್ಲಾಟ್ ನಲ್ಲಿ ನಡೆದಿದೆ.

ಭೀಮಪ್ಪ ಮುತ್ತಲಗಿ ಎಂಬಾತನೇ ತನ್ನ ಪತ್ನಿ ಮಂಜುಳಾಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ವಾರದ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದ ಮದ್ಯವ್ಯಸನಿಯೊಬ್ಬ ಪತ್ನಿಯನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ ಘಟನೆ ಮಾಸುವ ಮುನ್ನವೇ ಹಳೇಹುಬ್ಬಳ್ಳಿ ವ್ಯಾಪ್ತಿಯಲ್ಲಿ ಮತ್ತೊಂದು ಅಂತಹ ಕೃತ್ಯ ನಡೆದಿದೆ.

ಬರ್ಬರವಾಗಿ ಹತ್ಯೆ ಮಾಡಿದ ಭೀಮಪ್ಪನು ಭೀತಿಗೊಂಡು ತಾನೇ ಪೊಲೀಸರಿಗೆ ಶರಣಾಗಿದ್ದಾನೆ. ಈ ದುರ್ಘಟನೆಗೆ ದಂಪತಿ ಮಧ್ಯೆಯಿದ್ದ ಕೌಟುಂಬಿಕ ಕಲಹವೆ ಕಾರಣವೆಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆಎಸಿಪಿ ಆರ್.ಕೆ. ಪಾಟೀಲ, ಹಳೇಹುಬ್ಬಳ್ಳಿ ಠಾಣೆಯ ಇನ್ಸ್ ಪೆಕ್ಟರ್ ಸುರೇಶ ಯಳ್ಳೂರ ಹಾಗೂ ಪಿಎಸ್‌ಐ ಬನ್ನಿಕೊಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *