Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಅಪ್ಸರಾ ಥಿಯೇಟರ್‌ ನಲ್ಲಿ ಸಾವಜಿ ಊಟದ ವ್ಯವಸ್ಥೆ: ಇಂದು ಮಾತ್ರ!

ಹುಬ್ಬಳ್ಳಿಯಲ್ಲಿ ಡಾ||ಪುನೀತ್ ರಾಜಕುಮಾರ ಅಭಿಮಾನಿಗಳು “ಜೇಮ್ಸ್” ಸಿನಿಮಾ ನೋಡಲು ಬರುವ ಪ್ರೇಕ್ಷಕರಿಗೆ ಅಪ್ಪು ಹುಬ್ಬಳ್ಳಿ ಭಾಗದಲ್ಲಿ ಬಂದಾಗಲೆಲ್ಲ ತುಂಬಾ ಇಷ್ಟಪಟ್ಟು ಸಾವಜಿ ಊಟ ಮಾಡುತ್ತಿದ್ದರು.

ಈ ಮಾತನ್ನು ಸ್ವತಃ ಅಪ್ಪು ಅವರು ಬಹಿರಂಗ ಸಭೆ ಸಮಾರಂಭಗಳಲ್ಲಿಯೂ ಸಹ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡುವಾಗ ಈ ವಿಚಾರ ತಿಳಿಸುತ್ತಿದ್ದರು.
ಹೀಗಾಗಿಯೇ ಇಂದು ಅವರಿಗಿಷ್ಟದ ಸಾವಜಿ ಊಟವನ್ನು ಹುಬ್ಬಳ್ಳಿಯ ಅಪ್ಸರಾ ಸಿನಿಮಾ ಮಂದಿರಕ್ಕೆ ಬರುವ ಅವರ ಎಲ್ಲಾ ಅಭಿಮಾನಿಗಳಿಗೆ” ಜೇಮ್ಸ್‌ ” ಚಿತ್ರ ಬಿಡುಗಡೆಯಾದ ಮೂರನೆಯ ದಿನವಾದ ಇಂದು ಸಾವಜಿ ಊಟ ಮಾಡಲು ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.

ಹುಬ್ಬಳ್ಳಿಯ “ಜೈ ರಾಜವಂಶ”ಅಭಿಮಾನಿಗಳ ಬಳಗದ ಅಧ್ಯಕ್ಷ ರಾಘವ ಬದ್ದಿ ಮತ್ತು ಕುಮಾರ ಯಾತಗೇರಿ ಆಯೋಜಿಸಿದ್ದಾರೆ. ಅಪರೂಪದ ಇಂತಹ ಹೃದಯವಂತ ಅಭಿಮಾನಿಗಳಿಂದಲೆ ಅಪ್ಪು ಅವರು ಅಜರಾಮರ!

Related Articles

Leave a Reply

Your email address will not be published. Required fields are marked *