Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಆಜಾದಿ ಕಾ ಅಮೃತ ಮಹೋತ್ಸವ ಐಕ್ಯತಾ ನಡಿಗೆ

ಧಾರವಾಡ

ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಧಾರವಾಡ ಜಿಲ್ಲಾ ಪಂಚಾಯತ್,ಅಳ್ನಾವರ ಹಾಗೂ ಧಾರವಾಡ ತಾಲ್ಲೂಕು ಪಂಚಾಯತ್ ಸಹಯೋಗದಲ್ಲಿ ಇಂದು ನಗರದ ಪ್ರಮುಖ ಬೀದಿಗಳಲ್ಲಿ ಐಕ್ಯತಾ ನಡಿಗೆ ಜರುಗಿತು.

ಜಿಪಂ ಆವರಣದಿಂದ ಪ್ರಾರಂಭವಾದ ನಡಿಗೆಯು,ಜಿಲ್ಲಾಧಿಕಾರಿಗಳ ಕಚೇರಿ,ಕಾಲೇಜು ರಸ್ತೆ,ಆಲೂರು ವೆಂಕಟರಾವ್ (ಜ್ಯುಬಿಲಿ) ವೃತ್ತ,ಪಿಬಿ ರಸ್ತೆ ,ವೀರ ಸಿಂಧೂರ ಲಕ್ಷ್ಮಣ(ಕೋರ್ಟ್) ವೃತ್ತ ಮೂಲಕ‌ ಪುನಃ ಜಿಲ್ಲಾ ಪಂಚಾಯತ್ ಆವರಣ ತಲುಪಿತು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ,ಉಪ ಕಾರ್ಯದರ್ಶಿ ರೇಖಾ ಡೊಳ್ಳಿನವರ,ಯೋಜನಾ ನಿರ್ದೇಶಕ ಬಿ.ಎಸ್.ಮೂಗನೂರಮಠ,ಮುಖ್ಯ ಯೋಜನಾಧಿಕಾರಿ ದೀಪಕ್ ಮಡಿವಾಳ,ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಿರೀಶ ಕೋರಿ,ಸಂತೋಷ ತಳಕಲ್ ಮತ್ತಿತರ ಅಧಿಕಾರಿಗಳು,ಸಿಬ್ಬಂದಿ ವರ್ಗ,ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಜಾಥಾದಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *