Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಕಲುಷಿತ ಕೆರೆ ನೀರಿಗೆ ಸಾವಿರಾರು ಮೀನುಗಳ ಮಾರಣ ಹೋಮ

ಧಾರವಾಡ

ಧಾರವಾಡ ತಾಲೂಕಿನ ಶಿಬಾರಗಟ್ಟಿ ಗ್ರಾಮದಲ್ಲಿ ಕೆರೆಯ‌ ನೀರು ಕಲುಷಿತಗೊಂಡು ಸಾವಿರಾರು ಮೀನುಗಳು ಸಾವನ್ನಪ್ಪಿವೆ.

ಕೆರೆಯ ನೀರನ್ನು ದನಕರುಗಳು ಕುಡಿಯುವುದರಿಂದ ಜಾನುವಾರುಗಳಿಗೆ ರೋಗ ರುಜಿನ ಬರುವ ಆತಂಕದಲ್ಲಿ ರೈತರು ಇದ್ದಾರೆ.

ಲೋಕೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಈ ಊರು ಬರುತ್ತೆ. ಕೆರೆಯ ನೀರು ಖಾಲಿ ಮಾಡಲು ಗ್ರಾಮ ಪಂಚಾಯತ್ ಅಧಿಕಾರಿಗಳು ಮುಂದಾಗಿದ್ದಾರೆ.

14 ವರ್ಷದಲ್ಲಿ ಇದೇ ಮೊದಲ‌ ಈ ರೀತಿ ಕೆರೆಯ ನೀರು ಮಲೀನವಾಗಿದ್ದು, ರೈತಾಪಿ ವರ್ಗದ ಜನರಿಗೆ ಹಾಗೂ ಊರಿನ‌ ಗ್ರಾಮಸ್ಥರಿಗೆ ಆರೋಗ್ಯದ ದೃಷ್ಟಿಯಿಂದ ಕೆರೆ ನೀರು ಖಾಲಿ ಮಾಡುವುದು ಅನಿವಾರ್ಯವಾಗಿದೆ.

Related Articles

Leave a Reply

Your email address will not be published. Required fields are marked *