Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಕೆಯುಡಿ ವಿಸಿ ಪ್ರೊ. ಕೆ.ಬಿ.ಗುಡಸಿ ಅವರಿಗೆ ಗೌರವ ಫೆಲೋಶಿಪ್


ಧಾರವಾಡ.

ಧಾರವಾಡ ಕರ್ನಾಟಕ ‌ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ.ಗುಡಸಿ ಅವರು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಗೌರವ ಫೆಲೋಶಿಪ್ ಕ್ಕೆ ಪಾತ್ರರಾಗಿದ್ದಾರೆ.

ಸಂಶೋಧನೆ ಮತ್ತು ವಿಜ್ಞಾನಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರೊ. ಕೆ.ಬಿ.ಗುಡಸಿ ಅವರಿಗೆ ಗೌರವ ಫೆಲೋಶಿಪ್ ನೀಡಲಾಗಿದೆ.


ರಾಜ್ಯದ ವಿವಿಧ ವಲಯದ ವಿಜ್ಞಾನಿಗಳನ್ನು, ವಿಜ್ಞಾನ ಪರಿಣಿತರನ್ನು ಮತ್ತು ವಿಜ್ಞಾನ ಸಂವಹನಕಾರರನ್ನು ಗುರುತಿಸಿ ಫೆಲೋಶಿಪ್ ಮತ್ತು ಪ್ರಶಸ್ತಿಗಳನ್ನು ಶಿಫಾರಸ್ಸು ಮತ್ತು ಆಯ್ಕೆ ಮಾಡಲು ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಆಯ್ಕೆಯ ಮಂಡಳಿಯ (ಹಾನ್ರರಿ ಫೆಲೋಶಿಫ್) ಗೌರವ ಸದಸ್ಯರಾಗಿ ನಿಯುಕ್ತಿಗೊಂಡಿದ್ದಾರೆ.

ಬರುವ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಪ್ರೊ.ಕೆ.ಬಿ.ಗುಡಸಿ ಅವರಿಗೆ ಗೌರವ ಫೆಲೋಶಿಪ್ ಅನ್ನು ಪ್ರದಾನ ಮಾಡಲಾಗುವದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಚೇರಮನ್ ಪ್ರೊ.ಎಸ್ ಅಯ್ಯಪ್ಪನ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *