Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಕೇಂದ್ರ ಸಚಿವರ ಅನುದಾನದಲ್ಲಿ ಸರ್ಕಾರಿ ಶಾಲೆ ಅಭಿವೃದ್ಧಿಗೆ ಮುಂದಾದ ಮೇಯರ್

ಧಾರವಾಡ

ಧಾರವಾಡ ಕಮಲಾಪುರದ ಸುಮಾರು 65 ವರ್ಷ ಹಳೆಯದಾದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ನಂಬರ-4 ಶಿಥಿಲಗೊಂಡಿರುವ ಕಟ್ಟಡವನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರ ಕೋರಿಕೆಯ ಮೇರೆಗೆ, ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಸನ್ಮಾನ್ಯ ಪ್ರಹ್ಲಾದ ಜೋಷಿ ರವರ ಕೋಲ್ ಇಂಡಿಯಾ ಲಿಮಿಟೆಡ್ ನ ಸಿ.ಎಸ್.ಆರ್ ಅನುದಾನದಲ್ಲಿ ಅಂದಾಜು 1 ಕೋಟಿ 31 ಲಕ್ಷಗಳ ವೆಚ್ಚದಲ್ಲಿ ನೂತನ 8 ಕೊಠಡಿಗಳ ಕಟ್ಟಡ ಪುನರ್ ನಿರ್ಮಾಣದ ಕಾಮಗಾರಿಯ ಸ್ಥಳ ಪರಿಶೀಲನೆಯನ್ನು ನಡೆಸಲಾಯಿತು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ಶಾಲೆಯನ್ನು ಪರಿಶೀಲನೆ ಮಾಡಿದರು.

ಈಗಿರುವ ಶಾಲೆಯನ್ನು ಸ್ಥಳಾಂತರಿಸುವ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಶಾಖೆಯ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ ರವರು, ಪಾಲಿಕೆಯ ಸದಸ್ಯರಾದ ರಾಜಶೇಖರ ಕಮತಿ ರವರು, ರಾಜು ತಳಗೇರಿ ರವರು, ಬಸವಣ್ಣೆಪ್ಪ ಅಣ್ಣಿಗೇರಿ ರವರು, ಬಸು ಬಾಳಗಿ ರವರು, ಮುರಗೇಶ ಹೊನ್ನಕೇರಿ ರವರು, ಈರಯ್ಯ ರಾಚಯ್ಯನವರ ರವರು, ಗಿರಿಯಪ್ಪ ಸಪ್ಪುರಿ ಭೀಮಪ್ಪ ಇಸರಣ್ಣವರ ರವರು, ವಿಠ್ಠಲ ಗೋಡ್ಸೆ ರವರು, ಪಕ್ಕೀರಪ್ಪಾ ಪರಮನ್ನವರ ರವರು, ಯಲ್ಲಪ್ಪ ಬಾಳಗಿ ರವರು, ಶಿವಪುತ್ರಪ್ಪ ಕೋಟಿ ರವರು, ಶ್ರೀಮತಿ ನಾಗರತ್ನ ಬಾವಿ ರವರು, ಮಲ್ಲೇಶ ಶಿಂಧೆ ರವರು, ನಿಂಗಪ್ಪ ಸಪೂರಿ ರವರು, ರಮೇಶ ತಳಗೇರಿ ರವರು, ಹಾಗೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *