Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಡಿಸೆಂಬರ್ 5 ರಂದು ಸವದತ್ತಿಗೆ ಬರಲಿದ್ದಾರೆ ಮಾಜಿ ಸಚಿವ ವಿನಯ‌ ಕುಲಕರ್ಣಿ

ಧಾರವಾಡ

ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯಕ್ಕೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿಗೆ ಆಗಮಿಸಲಿದ್ದಾರೆ.

ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ ಪರವಾಗಿ ಪ್ರಚಾರ ನಡೆಸಲಿಕ್ಕೆ ವಿನಯ‌ ಕುಲಕರ್ಣಿ ಅವರು ಆಗಮಿಸುತ್ತಿದ್ದು, ಸಲೀಂ ಅಹ್ಮದ ಅವರು ಈ ಪ್ರಚಾರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈಗಾಗಲೇ ಧಾರವಾಡ ಜಿಲ್ಲೆಯ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಚುನಾಯಿತ ಗ್ರಾಮ ಪಂಚಾಯತ್ , ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ ಜನಪ್ರತಿನಿಧಿಗಳಿಗೆ ಚುನಾವಣೆ ಪ್ರಚಾರದ ಸಮಾವೇಶದ ಕಾರ್ಯಕ್ರಮಕ್ಕೆ ಬರಲು ತಿಳಿಸಲಾಗಿದೆ.

ಧಾರವಾಡ ಜಿಲ್ಲೆಗೆ ಮಾಜಿ ಸಚಿವರ ಆಗಮನಕ್ಕೆ ನ್ಯಾಯಾಲಯದ ನಿರ್ಬಂಧ ಇರುವ ಕಾರಣ ಹೊರ ಜಿಲ್ಲೆಯಿಂದ ಜಿಲ್ಲೆಯ ಗಡಿಯಾಚೆಗಿನಿಂದ ಚುನಾವಣೆ ಪ್ರಚಾರದ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರು..

Related Articles

Leave a Reply

Your email address will not be published. Required fields are marked *