Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಧಾರವಾಡ ಜಿಲ್ಲೆಯಲ್ಲಿ ಭೀಕರ ಕೊಲೆ

ಧಾರವಾಡ

ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿ ರೈಲ್ವೆ ಹಳಿ ಮೇಲೆ ತಂದು ಹಾಕಿದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.


ಧಾರವಾಡ ತಾಲೂಕಿನ ಕ್ಯಾರಕೊಪ್ಪ ಮತ್ತು ಮುಗದ ರಸ್ತೆಯಲ್ಲಿರುವ ರೈಲ್ವೆ ನಿಲ್ದಾಣಗಳ ಮಧ್ಯ ಅಪರಿಚಿತ ವ್ಯಕ್ತಿಯನ್ನು ಭೀಕರವಾಗಿ ಕೊಂದು ಶವ ಎಸೆದು ಹೋಗಿದ್ದಾರೆ.


ಈ ಕೊಲೆಯಾದ ವ್ಯಕ್ತಿ ಎಲ್ಲಿಯವನು ಕೊಲೆ ಮಾಡಿದ್ದು ಯಾರು ಎನ್ನುವುದು ಕೂಡ ಇನ್ನು ಗೊತ್ತಾಗಿಲ್ಲಾ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

45 ವರ್ಷದ ವ್ಯಕ್ತಿಯ ಕೊಲೆಯಾಗಿದ್ದು, ಇವರ ಹೆಸರು, ಎಲ್ಲಿಯವರು ಏನು ಕೂಡ ಮಾಹಿತಿ ಸಿಗುತ್ತಿಲ್ಲಾ. ಹೀಗಾಗಿ ರೈಲ್ವೆ ಇಲಾಖೆ ಪೊಲೀಸರು ಅಪರಿಚಿತ ಶವ ಎಂದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮೃತನ ಎತ್ತರ 5.2 ಅಡಿ ಇದ್ದು, ಸಾಧಾರಣ ಮೈಕಟ್ಟು, ದುಂಡು ಮುಖ, ದಪ್ಪ ಮೂಗು, ಏರು ಹಣೆ, ತಲೆಯಲ್ಲಿ 2 ಇಂಚು ಕಪ್ಪು ಬಿಳಿ ಮಿಶ್ರಿತ ಕೂದಲು, ಕುರುಚಲು ಗಡ್ಡ ಹಾಗೂ ಮೀಸೆ ಇರುತ್ತದೆ.

ಕೊಲೆಯಾದವನ ಮೈಮೇಲೆ ತಿಳಿ ಹಸಿರು ಬಣ್ಣದ ಕಪ್ಪು ಗೆರೆಯುಳ್ಳ ಚಕ್ಸ ಪುಲ್​ ಶರ್ಟ ಇದೆ. ಇನ್ನು ಕಾಟನ್ ಜೀನ್ಸ ಪ್ಯಾಂಟ್ ಇದೆ. ಬಲಗೈ ನಡು ಬೆರಳಿನ ಮೇಲೆ ಓಂ ಎಂದು ಬರೆದಿರುವ ಸ್ಟೀಲಿನ ತರಹದ ಉಂಗುರ ಇದೆ.

ಈ ಅಪರಿಚಿತ ವ್ಯಕ್ತಿಯ ವಾರಸುದಾರರು ಯಾರಾದ್ರೂ ಇದ್ದರೆ ಕೂಡಲೇ 08362364751- 9480802126 ಈ ನಂಬರ್​ಗೆ ಸಂಪರ್ಕಿಸಿ ಎಂದು ರೈಲ್ವೆ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ.

Related Articles

Leave a Reply

Your email address will not be published. Required fields are marked *