Jannah Theme License is not validated, Go to the theme options page to validate the license, You need a single license for each domain name.
ಧಾರವಾಡಬೆಂಗಳೂರು

ಧಾರವಾಡದ ಅಪ್ಪು ಅಭಿಮಾನಿಯ ಆರೋಗ್ಯ ವಿಚಾರಿಸಿದ ರಾಘವೇಂದ್ರ ರಾಜ್ ಕುಮಾರ್

ಹುಬ್ಬಳ್ಳಿ

ಧಾರವಾಡ ಜಿಲ್ಲೆಯ ಮನಗುಂಡಿ ಗ್ರಾಮದ ದ್ರಾಕ್ಷಾಯಿಣಿ ಪಾಟೀಲ್ ವರ್ಷದ ಕೂಸಿನ ಜೋತೆಗೆ ಹಾಗೂ ಇಬ್ಬರು ಮಕ್ಕಳು ಹಾಗೂ ತಾಯಿ- ಗಂಡ- ಮತ್ತು ದೊಡ್ಡಮ್ಮನ ಜೊತೆಗೆ ಸಹ ಪರಿವಾರದೊಂದಿಗೆ ನೇತ್ರದಾನ ಹಾಗೂ ನೇತ್ರದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಧಾರವಾಡದಿಂದ – ಬೆಂಗಳೂರಿನ ಅಪ್ಪು ಸಮಾಧಿಯ ವರೆಗೂ ಸತತ 14 ದಿನಗಳ ಕಾಲ ಓಟ ಮಾಡುವ ಮೂಲಕ ತಲುಪಲಿದ್ದಾಳೆ.‌

ಇಂದಿಗೆ ಒಂಬತ್ತು ದಿನಗಳ ಕಾಲ ಓಡಿರುವ ದ್ರಾಕ್ಷಾಯಿಣಿ ಗೆ ರಸ್ತೆಯ ಮಧ್ಯೆ ನಟ ಶಿವರಾಜಕುಮಾರ ಅಭಿಮಾನಿಗಳು ಮತ್ತು ದಿ! ಪುನಿತ್ ರಾಜಕುಮಾರ ಅಭಿಮಾನಿಗಳು ಸನ್ಮಾನಿಸುವ ಮೂಲಕ‌ ದ್ರಾಕ್ಷಾಯಿಣಿ ಪಾಟೀಲ್ ಓಟವನ್ನ ಪ್ರೋತ್ಸಾಹಿಸಿದ್ದಾರೆ.

ದಾವಣಗೆರೆ ವಿಷ್ಣು ಸೇನಾ ಅಭಿಮಾನಿಗಳಿಂದ ಸನ್ಮಾನ

ಅಪ್ಪು ಅಭಿಮಾನಿಗೆ ಕರೆ ಮಾಡಿದ ನಟ ಹಾಗೂ ಪುನಿತ್ ರಾಜಕುಮಾರ ಸಹೋದರ ದ್ರಾಕ್ಷಾಯಿಣಿಯ ಆರೋಗ್ಯ ವಿಚಾರಿಸಿದ್ದು ಪುನಿತ್ ರಾಜಕುಮಾರ ಮನೆಗೆ ಬಂದು ಅಶ್ವಿನಿ ಪುನಿತ್ ರಾಜಕುಮಾರ ಅವರನ್ನ ಭೇಟಿಯಾಗಲು ಸೂಚಿಸಿದ್ದಾರೆ.

Related Articles

Leave a Reply

Your email address will not be published. Required fields are marked *