Jannah Theme License is not validated, Go to the theme options page to validate the license, You need a single license for each domain name.
ರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಪಕ್ಷೇತರ ಅಭ್ಯರ್ಥಿಯ ಮೇಲೆ ಮಾರಣಾಂತಿಕ ಹಲ್ಲೆ!

POWER CITY news ಹುಬ್ಬಳ್ಳಿ: ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯ ಲಿಂಗರಾಜನಗರದ ಚಂದ್ರಗಿರಿ ಲೇಔಟ್ ಬಳಿ ನಡೆದಿದೆ.

ಘಟನೆಯಲ್ಲಿ ಗಾಯಗೊಂಡವನನ್ನು ಉಣಕಲ್ ಮೂಲದ ಮಲ್ಲಿಕಾರ್ಜುನ ತೋಟಗೇರ ಎಂದು ಗುರುತಿಸಲಾಗಿದೆ.

ಮಲ್ಲಕಾರ್ಜುನ ತೊಟಗೇರ

ಮಲ್ಲಿಕಾರ್ಜುನ ತೊಟಗೇರ ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಮತ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ಆದರೆ ಇಂದು ಮಲ್ಲಿಕಾರ್ಜುನ ತನ್ನ ಸ್ನೇಹಿತನಾದ ಸುನೀಲ್ ಖೋಡೆ ಹುಬ್ಬಳ್ಳಿಯ ಚಂದ್ರಗಿರಿ ಲೇಔಟ್ ನಿವಾಸಿಯಾದ ಇವರ ಮನೆಗೆ ತೆರಳಿದ್ದು ಅಲ್ಲಿಯೆ ಮಾರಣಾಂತಿಕ ವಾಗಿ ಹಲ್ಲೆಗಿಡಾಗಿದ್ದಾರೆ ಎನ್ನಲಾಗಿದೆ.

ತೀವ್ರ ಗಾಯಗೊಂಡ ಮಲ್ಲಿಕಾರ್ಜುನ ತನ್ನ ಮಗನಿಗೆ ಕರೆಮಾಡಿ ತನಗೆ ಆಗಿರುವ ಘಟನೆಯ ಕುರಿತು ತಿಳಿಸಿದ್ದಾನೆ. ಕೂಡಲೆ ಸ್ಥಳಕ್ಕೆ ಬಂದ ಮಲ್ಲಿಕಾರ್ಜುನ ಅವರ ಕುಟುಂಬಸ್ಥರು ರಕ್ತದ ಮಡುವಿನಲ್ಲಿದ್ದ ಮಲ್ಲಿಕಾರ್ಜುನ ನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.

Power

city news


ಕಿಮ್ಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಲ್ಲಿಕಾರ್ಜುನ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ಕುರಿತು ವಿದ್ಯಾನಗರದ ಪೊಲಿಸರು ಮಾಹಿತಿ ನೀಡಲು ಹಿಂದೇಟು ಹಾಕಿದ್ದು.ಆರೋಪಿಗಳು ಯಾರು? ಘಟನೆಗೆ ಕಾರಣವೇನು ಎಂಬುದು ಕೂಡ ಪೊಲಿಸರ ತನಿಖೆಯಿಂದಷ್ಟೆ ತಿಳಿದು ಬರಬೇಕಿದೆ.

Related Articles

Leave a Reply

Your email address will not be published. Required fields are marked *