Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿಹುಬ್ಬಳ್ಳಿ

ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುರುಳರು: ಸ್ಥಳದಿಂದ ಪರಾರಿ!

ಹುಬ್ಬಳ್ಳಿ

ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಇಲ್ಲಿನ ದೇವನೂರು ಕ್ರಾಸ್ ಬಳಿ ಇಂದು ಮಧ್ಹ್ಯಾನ ನಡೆದಿದೆ‌.

ಘಟನೆಗೆ ಸಂಭಂದಿಸಿದಂತೆ ಇದುವರೆಗೂ ಯಾರನ್ನೂ ಬಂದಿಸಿಲ್ಲ. ಆದ್ರೆ ಹಲ್ಲೆಗೆ ಹಳೆ ವೈಷಮ್ಯದ ಹಿನ್ನೆಲೆ ಇದ್ದು ವ್ಯಕ್ತಿ ಹೇಳುವ ಪ್ರಕಾರ ಆತನ ಹೆಂಡತಿಯ ಸಹೋದರ ಹಾಗೂ ಆತನ ಸ್ನೇಹಿತರೆ ಬಂದು ಕ್ಷುಲ್ಲಕ ವಿಷಯ ಪ್ರಸ್ತಾಪಿಸಿ ಹಲ್ಲೆ ನಡೆಸಿದ್ದಾರೆಂದ ತೌಸಿಫ ನ ಕುಟುಂಬಸ್ಥರು ಸಹ ಆರೋಪಿಸುತ್ತಿದ್ದಾರೆ.

ತೌಸೀಫ ಸಹೋದರ

ಹಳೆ ಹುಬ್ಬಳ್ಳಿಯ ಆನಂದನಗರದ ನಿವಾಸಿಯಾದ ತೌಸೀಪ್ ಫಸ್ಕಿ ಎಂಬುವರ ಮೇಲೆ ಬಾಟಲಿ,ಚಾಕು ಮತ್ತು ಕಲ್ಲು ಗಳಿಂದ ಹಲ್ಲೆ ಮಾಡಿದ್ದಾರೆಂದು ತಿಳಿದು ಬಂದಿದೆ.ಇನ್ನೂ ಹಲ್ಲೆಗೊಳಗಾಗಿರುವ ವ್ಯಕ್ತಿಯು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆದ್ರೆ ಕುಂದಗೋಳ ಪೊಲಿಸರು ಈ ಘಟನೆಯ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ ಎಂಬುದು ಮೇಲ್ಮೋಟಕ್ಕೆ ಕಂಡು ಬರುತ್ತಿದೆ.

Related Articles

Leave a Reply

Your email address will not be published. Required fields are marked *