ಸ್ಥಳೀಯ ಸುದ್ದಿ

ಅವಳಿನಗರದಲ್ಲಿ ಶೀಘ್ರದಲ್ಲೇ ಹೈಟೆಕ ಬಸ್ ನಿಲ್ದಾಣಗಳು

ಧಾರವಾಡ

ಇಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಉಚಿತ ವೈಫೈ, ಸಿಸಿ ಟಿವಿ, ಹಾಗೂ ಹವಾನಿಯಂತ್ರಣಗಳನ್ನು ಹೊಂದಿರುವ ನೂತನ ಹೊಸ 500 ಬಸ್ ನಿಲ್ದಾಣಗಳ ಸ್ಥಾಪನೆಗಾಗಿ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಮುಂದಾಗಿದೆ.


ಖಾಸಗಿ ಕಂಪನಿಯೊಂದರ ಸಹಯೋಗದಲ್ಲಿ ಪ್ರಾಯೋಗಿಕ ಬಸ್ ನಿಲ್ದಾಣ ನಿರ್ಮಿಸಲು ಧಾರವಾಡದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು ಸ್ಥಳ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಧಾರವಾಡ ವಲಯ 3 ರ ಸಹಾಯಕ ಆಯುಕ್ತರಾದ ಆರ್.ಎಂ.ಕುಲಕರ್ಣಿ ರವರು ಹಾಗೂ ಖಾಸಗಿ ಕಂಪನಿಯ ಪರವಾಗಿ ವೇಮನ್ ಮಂಕಣಿ ಹಾಗೂ ರವಿರಾಜ ಕಮ್ಮಾರ ರವರು ಕೂಡಾ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button