ಸ್ಥಳೀಯ ಸುದ್ದಿ

ಕೆರೆಯಂತಾದ ಧಾರವಾಡದ ರಸ್ತೆಗಳು.

Click to Translate

ಧಾರವಾಡ

ಧಾರವಾಡ ಸ್ಮಾರ್ಟ ಸಿಟಿ ರಸ್ತೆಗಳಲ್ಲಿ ಒಂದಾದ ಧಾರವಾಡದ ಟೆಂಡರ್ ಶ್ಯೂರ್ ರಸ್ತೆ ಮಳೆಗಾಲದಲ್ಲಿ ಅಧ್ವಾನವನ್ನೇ ಸೃಷ್ಟಿ ಮಾಡುತ್ತಿದೆ.

ಧಾರವಾಡ ನಗರದಲ್ಲಿ ಸಂಜೆ ಸುರಿದ ಮಳೆಗೆ ರಸ್ತೆಯೆಲ್ಲಾ ಕೆರೆಯಂತಾದ ಉದಾಹರಣೆಗಳು ಆಗಿವೆ.

ಧಾರವಾಡದ ಡಿಪೋ ಸರ್ಕಲ್ ಬಳಿ ರಸ್ತೆ ಸಂಪೂರ್ಣವಾಗಿ ಕೆರೆಯಂತಾಗಿದೆ.

ಓಲ್ಡ್ ಎಸ್ಪಿ ಸರ್ಕಲ್ ನಿಂದ ಮುರಘಾಮಠದ ವರೆಗೂ ಇರುವ ಈ ರಸ್ತೆಯುದ್ದಕ್ಕೂ ಗಟಾರಗಳನ್ನು ಸರಿಯಾಗಿ ಮಾಡದೇ ಇರುವ ಪರಿಣಾಮ ಗಟಾರಿನ ನೀರು ಮಳೆ ನೀರಿನೊಂದಿಗೆ ಮಿಶ್ರಣವಾಗಿ ರಸ್ತೆಯ ತುಂಬೆಲ್ಲಾ ಕೊಳಕು ದುರ್ವಾಸನೆ ಬೀರುತ್ತಿವೆ.

ಈ ಸಮಸ್ಯೆಗೆ ಪಿಡಬ್ಲೂಡಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವ ರೀತಿ ಸ್ಪಂದಿಸುತ್ತಾರೆ ನೋಡಬೇಕಿದೆ.

ಪವರ್ ಸಿಟಿ‌ನ್ಯೂಸ್ ಕನ್ನಡ ಇದು ಸತ್ಯ‌ಸದಾಕಾಲ

Related Articles

Leave a Reply

Your email address will not be published. Required fields are marked *

Back to top button