ಸ್ಥಳೀಯ ಸುದ್ದಿ

ಚಂದ್ರಯಾನ ಉಪಗ್ರಹ ಉಡಾವಣೆಗೆ ಶುಭಕೋರಿದ ವಿಶೇಷ ಕಲಾವಿದ

ಧಾರವಾಡ

ಇಂದು ಮದ್ಯಾಹ್ನ 2:35ಕ್ಕೆ ಆಂದ್ರಪ್ರದೇಶದ ಶ್ರೀಹರಿಕೋಟದ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ ಉಪಗ್ರಹ ಉಡಾವಣೆಗೆ ವಿಭಿನ್ನ ರೀತಿಯಲ್ಲಿ ಧಾರವಾಡದ ಕಲಾವಿದ ಮಂಜುನಾಥ ಹಿರೇಮಠ ಶುಭ ಕೋರಿದ್ದಾರೆ.

10 ಇಂಚಿನ ಈ LMV ವಾಹಕದ ಪ್ರತಿಕೃತಿ ತಯಾರಿಸಿದ್ದಾರೆ. ಸುಮಾರು ನಲವತ್ತು ದಿನಗಳ ಈ ಚಂದ್ರಯಾನದಲ್ಲಿ ಯಾವುದೇ ರೀತಿಯ ವಿಘ್ನಗಳು ಉಂಟಾಗದಿರಲೆಂದು ಗಣೇಶಲ್ಲಿ ಬೇಡಿಕೊಂಡಿದ್ದಾರೆ ಕಲಾವಿದ ಮಂಜುನಾಥ ಹಿರೇಮಠ.

ಕಳೆದ ಬಾರಿ 2019 ರಲ್ಲಿನ ಚಂದ್ರಯಾನ..2 ದಲ್ಲಿ ವಿಕ್ರಮ್ ಲ್ಯಾಂಡರ್ ಉಪಗ್ರಹ ಇನ್ನೇನು ಚಂದ್ರನ ಮೇಲೆ ಇಳಿದೇ ಬಿಟ್ಟಿತು ಎನ್ನುವಷ್ಟರಲ್ಲಿ ಜೋರಾಗಿ ಬಿದ್ದು ಹಾಳಾಗಿತ್ತು.ಅದರಿಂದ ವಿಜ್ಞಾನಿಗಳಿಗಷ್ಟೇ ಅಲ್ಲ ಎಲ್ಲ ಭಾರತೀಯರ ಮನಸ್ಸಿಗೂ ನೋವಾಗಿತ್ತು ,ಈ ಬಾರಿ ಹಾಗಾದಿರಲೆಂದು ನಾವೆಲ್ಲರೂ ಭಗವಂತನಲ್ಲಿ ಪ್ರಾರ್ಥಿಸೋಣ ಎಂದು ಗಣೇಶನಲ್ಲಿ ಪ್ರಾರ್ಥಿಸಿ ಈ ಕಲಾಕೃತಿ ತಯಾರಿಸಿದ್ದಾರೆ ಧಾರವಾಡದ ಕಲಾವಿದ ಮಂಜುನಾಥ ಹಿರೇಮಠ.

Related Articles

Leave a Reply

Your email address will not be published. Required fields are marked *

Back to top button