Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಗದಗ ಬಳಿ ಭೀಕರ ರಸ್ತೆ ಅಪಘಾತ ಒಂದೇ ಗ್ರಾಮದ ಮೂವರು ಸಾವು

ಗದಗ: ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೂವರು ದಾರುಣವಾಗಿ ಸಾವನ್ನಪ್ಪಿರೋ ಘಟನೆ ಗದಗ ತಾಲೂಕಿನ ಅಡವಿಸೋಮಾಪೂರ ಬಳಿ ಸಂಭವಿಸಿದೆ. ಶಿವಪ್ಪ ನಾಯಕ್ (50), ಶಿವಾನಂದ ಲಮಾಣಿ (33) ಕೃಷ್ಣಪ್ಪ ಚೌಹ್ವಾನ್ ಮೃತ ದುರ್ದೈವಿಗಳು.ಅಡವಿಸೋಮಾಪುರ ಗ್ರಾಮದಿಂದ ಮುಂಡರಗಿಗೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಮೃತ ಮೂವರು ಮುಂಡರಗಿ ತಾಲೂಕಿನ ಸಿಂಗಟರಾಯನಕೇರಿ ತಾಂಡಾದ ನಿವಾಸಿಗಳು. ಟಿವಿಎಸ್ ಎಕ್ಸೆಲ್, ಹೀರೋ ಸ್ಪ್ಲೆಂಡರ್ ಹಾಗೂ ಚವರ್ಲೆಟ್ ಕಾರ್ಮ ಮಧ್ಯೆ ಸರಣಿ ಅಪಘಾತ ಅಪಘಾತ ಸಂಭವಿಸಿದೆ. ಗದಗ ಕಡೆಯಿಂದ ಕಾರು ಅತೀ ವೇಗವಾಗಿ ಬಂದು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸ್​​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಗ್ರಾಮೀಣ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *