ರಾಷ್ರ್ಟೀಯ

ನವೆಂಬರ್ 26-2008 ರ ಕರಾಳ‌ ನೆನಪು…

ನವದೆಹಲಿ

2008 ನವೆಂಬರ್ 26 ಬಹುಶಃ ನಾವ್ಯಾರು‌ ಭಾರತೀಯರು ಈ‌ ದಿನವನ್ನು ಮರೆಯಲು ಸಾಧ್ಯವೇ ಇಲ್ಲಾ..

ನವೆಂಬರ್‌ 26, 2008ರಂದು, ಮುಂಬಯಿ ಮೇಲೆ ಉಗ್ರರು ನಡೆಸಿದ ದಾಳಿ ಭಾರತದ ಇತಿಹಾಸದಲ್ಲಿಯೇ ಒಂದು ಕಪ್ಪು ಚುಕ್ಕಿಯಾಗಿ ಉಳಿದಿದೆ.

ಪಾಕಿಸ್ತಾನ ಪೋಷಿತ ಲಷ್ಕರೆ ತೈಬಾ ಉಗ್ರ ಸಂಘಟನೆಯ ಸುಮಾರು 10 ಉಗ್ರರ ತಂಡ ದೋಣಿ ಮೂಲಕ ಮುಂಬಯಿ ಪ್ರವೇಶಿಸಿ‌ ದೊಡ್ಡ ದಾಳಿಯನ್ನೇ ನಡೆಸಿದ್ರು.

ಮುಂಬೈ ತಾಜ್ ಹೊಟೆಲ್, ನಾರಿಮನ್ ಹೌಸ್, ರೈಲ್ವೆ ನಿಲ್ದಾಣದಲ್ಲಿ ಉಗ್ರವಾದಿಗಳು ಜನರ ಪ್ರಾಣವನ್ನೇ ತೆಗೆದ್ರು.

ಸುಮಾರು 4 ದಿನಗಳ‌ ಕಾಲ
ಅಲ್ಲಲ್ಲಿ ಚೆದುರಿ ಸರಣಿ ದಾಳಿ ನಡೆಸಿದ್ರು ಈ ಉಗ್ರರು.

ನಿರಂತರ ದಾಳಿಯಲ್ಲಿ ನಮ್ಮ ಹೆಮ್ಮೆಯ ಪೊಲೀಸ್ ಅಧಿಕಾರಿಗಳು , nsg ಕಮಾಂಡೊಗಳು ಹುತಾತ್ಮರಾದ್ರು.

ಈ ಘಟನೆಯಲ್ಲಿ 166 ಮಂದಿ ಸಾವನ್ನಪ್ಪಿದರು.

ಭದ್ರತಾ ಪಡೆ ಓರ್ವ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಯಿತು.

ಹಲವು ವರ್ಷಗಳ ಸುದೀರ್ಘ ಕಾನೂನು ಹೋರಾಟ, ನ್ಯಾಯಾಂಗ ತನಿಖೆ, ಜೈಲು ಶಿಕ್ಷೆ ನಂತರ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಸೆರೆ ಸಿಕ್ಕ ಉಗ್ರನಿಗೆ ಆತನ ಚಾಪ್ಟರ್‌ ಅಂತ್ಯಗೊಳಿಸಿದ್ದು ನಮಗೆಲಾ ನೆಮ್ಮದಿ ನೀಡಿತ್ತು.

ಆದರೆ ಇತ್ತೀಚೆಗೆ ಪಾಕಿಸ್ತಾನ ಗೃಹ ಬಂಧನದಲ್ಲಿ ಇರಿಸಿಕೊಂಡಿದ್ದ ಮುಂಬಯಿ ದಾಳಿಯ ಪ್ರಮುಖ ರೂವಾರಿ ಹಫೀಜ್‌ ಸಯಿದ್‌ನನ್ನು ಬಿಡುಗಡೆಗೊಳಿಸುವ ಮೂಲಕ ಭಾರತೀಯರ ರಕ್ತ ಕುದಿಯುವಂತೆ ಮಾಡಿದೆ.

Related Articles

Leave a Reply

Your email address will not be published. Required fields are marked *

Back to top button