Jannah Theme License is not validated, Go to the theme options page to validate the license, You need a single license for each domain name.
BusinessDHARWADHubballiLife StyleTechTravelWorld

ಸಾರಿಗೆ ಸೇವೆಯಲ್ಲಿ ಫಿಲೋಮಿನ್ ಪೌಲ್:ಹೇಳಿದ್ದೇನು?

POWERCITY NEWS : HUBLI

ಹುಬ್ಬಳ್ಳಿ: ಬಡವ ಶ್ರೀಮಂತ ಎನ್ನುವ ಭೇದವಿಲ್ಲದೆ ಸಂಭ್ರಮ ಸಡಗರ ಭಕ್ತಿಭಾವದಿಂದ ಆಚರಿಸುವ ದಸರಾ ನಂತರದ ದೀಪಾವಳಿ ಪ್ರತಿ ಮನೆ ಮನ ಮುಟ್ಟುವ ಹಬ್ಬವಿದು ಹೀಗಾಗಿ ಇದಿನ ನಾವು ಸಾರ್ವಜನಿಕ ಸೇವೆಯಲ್ಲಿರುವ ಎಲ್ಲ ವಾಹನ ಮತ್ತು ಪರಿಕರಗಳನ್ನು ಶೃದ್ಧಭಾವನೆಯಿಂದ ಪೂಜಿಸುವ ಮೂಲಕ ನಮ್ಮ ಜೊತೆಗಿರುವ ವೃತ್ತಿ ವೃಂದದ ಎಲ್ಲರಿಗೂ ಸಿಹಿ ಹಂಚಿ ಮಾತೆ ಲಕ್ಷ್ಮೀ ದೇವಿಯನ್ನು ಪೂಜಿಸುವುದರ ಜೊತೆಗೆ ದೀಪಾವಳಿಯ ಆಚರಿಸುತ್ತೆವೆ ಎನ್ನುತ್ತಾರೆ ಪೌಲ್ ಟ್ರಾನ್ಸ್ ಉದ್ಯಮಿ ಫಿಲೋಮಿನ್ ಪೌಲ್.

ಖಾಸಗಿ ಒಡೆತನದ ಸಾರಿಗೆ ಸೇವೆಯಲ್ಲಿ ತಮ್ಮದೆ ಆದ ಸೇವೆ ಒದಗಿಸುತ್ತಿರುವ “ಫೀಲೋಮಿನ್ ಪೌಲ್” ಸಮಾಜ ಸೇವೆಯಲ್ಲೂ ಎಲೆಮರೆಕಾಯಿಯಂತೆ ಇದ್ದರೂ ಸಹ ಸಮಾಜದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ.

“ಪೌಲ್ ಟ್ರಾನ್ಸ್” ಹುಬ್ಬಳ್ಳಿಯೇ ಮುಖ್ಯ ಕಚೇರಿಯಾಗಿದ್ದು ಇಲ್ಲಿಂದಲೇ ಕೊಲ್ಲಾಪುರ, ಪೂನಾ,ಮುಂಬೈ,ಹಾಗೂ ಬೆಂಗಳೂರು ಹುಬ್ಬಳ್ಳಿ ಗೋವಾ, ಸೇರಿದಂತೆ ರಾಜ್ಯಾದ್ಯಂತ ಹಾಗೂ ಅಂತರಾಜ್ಯ ಖಾಸಗಿ ಸಾರಿಗೆ ಲಕ್ಜೂರಿ ಬಸ್‌ಗಳ ಸೇವೆಯನ್ನು ಸಾರ್ವಜನಿಕ ಸೇವೆಗೆಂದೆ ಒದಗಿಸುತ್ತಾ ಬಂದಿದ್ದಾರೆ.

ಇನ್ನೂ ತಾಯ್ನೆಲದಿಂದಲೇ ಉತ್ತಮ ಉದ್ಯಮ ಕಂಡು ಕೊಂಡಿರುವ “ಪೌಲ್ ಟ್ರಾನ್ಸ್” ‌ಗೆ ಶುಭವಾಗಲಿ ಎಂದು ಪವರ್‌ಸಿಟಿ ನ್ಯೂಸ್ ಹಾರೈಸುತ್ತದೆ.

Related Articles

Leave a Reply

Your email address will not be published. Required fields are marked *