ಮಾದರಿ ಸೈನಿಕ ತರಬೇತಿ ಕೇಂದ್ರ
ಕಿತ್ತೂರು
ಬ್ರಿಟಿಷರ ವಿರುದ್ದ ಹೋರಾಡಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಶ್ರಮಿಸಿದ ಮಹಿಳೆ ವೀರರಾಣಿ ಕಿತ್ತೂರು ಚೆನ್ನಮ್ಮ.
ಇಂತಹ ಚೆನ್ನಮ್ಮನ ನಾಡಿನಲ್ಲಿ
ದೇಶ ಕಾಯುವ ಯೋಧರಾಗಬೇಕು ಎನ್ನುವರಿಗೆ ತರಬೇತಿ ಕೊಡುವ ಸಂಸ್ಥೆ ಒಂದಿದೆ.
ಅದುವೇ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ.
ಶ್ರೀ ಪರ್ವೇಜ ಹವಾಲ್ದಾರ್ ಎನ್ನುವ ನಿವೃತ್ತ ಸೇನಾಧಿಕಾರಿ ಈ ಸಂಸ್ಥೆಯನ್ನು ಆರಂಭಿಸಿದ್ದಾರೆ.
ಈ ತರಬೇತಿ ಕೇಂದ್ರದ ಸಂಸ್ಥಾಪಕರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿ ಕೊಡ್ತೇವಿ.
ಶ್ರೀ ಪರ್ವೇಜ್ ಹವಾಲ್ದಾರ, ನಿವೃತ್ತ ಸೇನಾಧಿಕಾರಿಗಳು, ಸಂಸ್ಥಾಪಕರು,ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ,ಚೆನ್ನಮ್ಮನ ಕಿತ್ತೂರ
ಇವರು ಭಾರತೀಯ ಸೇನೆಯಲ್ಲಿ 9 ಪ್ಯಾರಾಚೂಟ್ ರೆಜಿಮೆಂಟ್ ನಲ್ಲಿ 20 ವರ್ಷ ಸೇವೆ ಸಲ್ಲಿಸಿ ಜೂನಿಯರ ಕಮೀಷನಡ್ ಆಫೀಸರ್ ಹುದ್ದೆಯಿಂದ ನಿವೃತ್ತ ಹೊಂದಿ 01 ಸೆಪ್ಟೆಂಬರ್ 2017 ರಲ್ಲಿ ಈ ಸಂಸ್ಥೆಯನ್ನು ಸ್ಥಾಪನೆ ಮಾಡಿ, ಅಭ್ಯರ್ಥಿಗಳಿಗೆ ತರಬೇತಿ ಕೊಡುತ್ತಿದ್ದಾರೆ.
ಇಲ್ಲಿ ತರಬೇತಿ ಪಡೆದ 183 ಯುವಕರು ಹಾಗೂ 2 ಯುವತಿಯರು ಸೇನೆಯಲ್ಲಿ ಸೇರ್ಪಡೆ ಗೊಂಡಿದ್ದಾರೆ.
ಸೇನೆಯಲ್ಲಿ ಜ್ಯೂನಿಯರ್ ಕಮೀಶನ್ಡ ಆಫೀಸರ್ ಆಗಿ ಅಪಾರ ಅನುಭವ ಹೊಂದಿರುವ ಪರ್ವೇಜ್ ಅವರು ತಮ್ಮ ಸೇನೆಯಲ್ಲಿನ ಕಠಿಣ ಸವಾಲುಗಳನ್ನು ಅಭ್ಯರ್ಥಿಗಳಿಗೆ ತರಬೇತಿಯಲ್ಲಿ ತಿಳಿಸಿಕೊಡುತ್ತಿದ್ದಾರೆ.
ರಾಜ್ಯದ ಬೇರೆ ಬೇರೆ ಜಿಲ್ಲೆಯ ಅಭ್ಯರ್ಥಿಗಳು ಸೈನ್ಯಕ್ಕೆ ಸೇರಬೇಕು ಎನ್ನುವರು ಇಲ್ಲಿಗೆ ಬಂದು 3 ತಿಂಗಳು ಕಠಿಣ ತರಬೇತಿ ಪಡೆದು ಭಾರತೀಯ ಸೇನೆ ಸೇರುತ್ತಿದ್ದಾರೆ.
ಅತಿ ಕಡಿಮೆ ಶುಲ್ಕದಲ್ಲಿ ಅಭ್ಯರ್ಥಿಗಳಿಗೆ ವಾಸ್ತವ್ಯದ ಜೋತೆಗೆ ಊಟದ ವ್ಯವಸ್ಥೆಯನ್ನು ಅನುಕೂಲ ಮಾಡಿ ಆರೋಗ್ಯದ ಕಾಳಜಿ ವಹಿಸಿ, ಮಹಿಳಾ ಅಭ್ಯರ್ಥಿಗಳು ಇದ್ದರೆ ಅವರ ಸುರಕ್ಷತೆಯನ್ನು ನೋಡಿಕೊಂಡು ತರಬೇತಿ ಕೊಡಲಾಗುತ್ತೆ.
ಸಂಸ್ಥೆಯನ್ನು 2017 ಸೆಪ್ಟಂಬರ್ 1 ರಂದು ಸ್ಥಾಪನೆ ಮಾಡಿದ ಶ್ರೀ ಪರ್ವೇಜ್ ಹವಾಲ್ದಾರ ಹೇಳುವುದು ಇಷ್ಟು…
ಇನ್ನು ಇಲ್ಲಿ ತರಬೇತಿ ಪಡೆದು ಹೋಗಿರುವವರು ಸೇನೆ ಸೇರಿದ ನಂತರ ರಜೆಯ ದಿನಗಳಲ್ಲಿ ಇಲ್ಲಿಗೆ ಬಂದು ತಮ್ಮ ಅನುಭವ ಹಂಚಿಕೊಳ್ತಾರೆ.
ಅಭ್ಯರ್ಥಿಗಳು ಇಲ್ಲಿರುವ ಕಠಿಣ ತರಬೇತಿಯ ಬಗ್ಗೆ ಹೇಳುವುದು ಹೀಗೆ…
_ದೇಶ ಕಾಯುವ ಕೆಲಸಕ್ಕೆ ಯುವಕರನ್ನು ತಯಾರು ಮಾಡುತ್ತಿರುವ ಇವರ ಸೇವೆ ನೀಜಕ್ಕೂ ಶ್ಲಾಘನೀಯ..
ಪವರ್ ಸಿಟಿನ್ಯೂಸ್ ಕನ್ನಡದಿಂದ ಈ ತಂಡಕ್ಕೆ ಹಾಗೂ ಅಭ್ಯರ್ಥಿಗಳಿಗೆ ಆಲ್ ದಿ ಬೆಸ್ಟ್….