ಬೆಳಗಾವಿ

ಯೋಧನ ಸಾವಿನ ಸುತ್ತ ಅನುಮಾನದ ಹುತ್ತ.

ಸವದತ್ತಿ

ಸವದತ್ತಿ ತಾಲೂಕಿನ ಹಿರೂರ ಗ್ರಾಮದ ಯೋಧ ರಜೆಯ ಮೇಲೆ ಗ್ರಾಮಕ್ಕೆ ಅಗಮಿಸಿದ್ದು ಅನುಮಾನಾಸ್ಪದವಾಗಿ ಸಾವಿಗೀಡಾದ ದುರ್ಘಟನೆ ನಡೆದಿದೆ.

ಮೃತ ಯೋಧನನ್ನು ಈರಪ್ಪಾ ಬಸಪ್ಪ ಪೂಜಾರಿ ಎಂದು ಗುರುತಿಸಲಾಗಿದೆ.
ಸಹೋದರಿಯ ಪುತ್ರಿಯ ಮದುವೆ ಆಮಂತ್ರಣ ಪತ್ರಿಕೆ ಕೊಡಲು ಡಿ.25 ರಂದು ಸಂಜೆ ಯೋಧ ತೆರಳಿದ್ದರು.

ತಡರಾತ್ರಿಯಾದರೂ ಮನೆಗೆ ಮರಳಿ ಬಂದಿರಲಿಲ್ಲ. ಬೆಳಗಿನ ಜಾವ ಗ್ರಾಮದ ಹೊರ ವಲಯದಲ್ಲಿ ಯೋಧನ ಶವ ಪತ್ತೆಯಾಗಿದೆ.

ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ, ನಂತರ ಹಿರೂರ ಗ್ರಾಮದ ಹದ್ದಿನಲ್ಲಿರುವ ಜನತಾ ಪ್ಲಾಟ್ ಹತ್ತಿರದ ಪಾಳುಬಿದ್ದ ಬಾವಿಗೆ ಮೃತದೇಹ ಎಸೆದಿರುವ ಶಂಕೆಯನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ.

ಅದ್ದೂರಿ ಮದುವೆ ಒಂದೆಡೆಯಾದರೆ ವಿಧಿಯ ಲಿಖಿತವೇ ಬೇರೆಯಾಗಿತ್ತು.

ಆಮಂತ್ರಣ ನೀಡುವ ಆರಂಭದ ದಿನವೇ ಯೋಧ ಸಾವಿಗೀಡಾಗಿದ್ದು ಕುಟುಂಬಸ್ಥರನ್ನು ತಬ್ಬಿಬ್ಬುಗೊಳಿಸಿತ್ತು.

ಮೃತ ಸೈನಿಕನ ಪಾರ್ಥಿವ ಶರೀರವನ್ನು ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

ಕೊಲೆ ಮಾಡಿದ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸುವಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಸವದತ್ತಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 366/2021 ಕಲಂ 302, 201 ಐಪಿಸಿ ದನ್ವಯ ಪ್ರಕರಣ ದಾಖಲಾಗಿದೆ

Related Articles

Leave a Reply

Your email address will not be published. Required fields are marked *

Back to top button