Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಕಾರ್ಪೋರೆಶನ್ ಹೆರಿಗೆ ಆಸ್ಪತ್ರೆ ಶೀಘ್ರವೇ ಮೇಲ್ದರ್ಜೆಗೆ- ಮೇಯರ್ ಅಂಚಟಗೇರಿ


ಧಾರವಾಡ

ಬಡವರ ಪಾಲಿನ ಆಶಾಕಿರಣ ಈ ಆಸ್ಪತ್ರೆ. ಇಂತಹ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಕಾಳಜಿ ವಹಿಸುವ ಕೆಲಸವನ್ನು ಮೇಯರ್ ಮಾಡಿದ್ದಾರೆ.

ಹಳೆ ಬಸ್ ನಿಲ್ದಾಣದ ಪಕ್ಕದಲ್ಲಿ ಇರುವ ಕಾರ್ಪೊರೇಶನ್ ಆಸ್ಪತ್ರೆಗೆ ಮಾನ್ಯ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ ಅವರು ಭೇಟಿ ನೀಡಿ ಆಸ್ಪತ್ರೆಯಲ್ಲಿಯ ಕಾರ್ಯ ಚಟುವಟಿಕೆಗಳ ಮಾಹಿತಿ ಯನ್ನು ಮುಖ್ಯ ವೈದ್ಯಾಧಿಕಾರಿಯಾದ ದಂಡಪ್ಪನವರ ಅವರಿಂದ ಪಡೆದರು.


ಆಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆಗಳಿಗಿಂತ ಕಡಿಮೆ ಶುಲ್ಕ ಇರುವದರಿಂದ ಮತ್ತು ಧಾರವಾಡದ ಪ್ರಸಿದ್ಧ ಹಿರಿಯ ಖಾಸಗಿ ವೈದ್ಯರು ಹೆರಿಗೆ ಆಸ್ಪತ್ರೆಯಲ್ಲಿ ರೋಗಿಗಳನ್ನು ತಪಾಸಣೆ ಮಾಡುತ್ತಿರುವದರಿಂದ ಜನ ಸಾಮಾನ್ಯರಿಗೆ ಬಹಳ ಅನುಕೂಲ ಆಗಿದೆ.

ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಎರಿಸಲು ಬೇಕಾದ ಸಹಕಾರ ಮಹಾನಗರ ಪಾಲಿಕೆ ವಂತಿಯಿಂದ ನೀಡಲಾಗುವುದು ಎಂದು ಮೇಯರ್ ತಿಳಿಸಿದರು.

ಈ ಭೇಟಿಯ ಸಂದರ್ಭದಲ್ಲಿ ಕಾರಪೊರ್ಟರರಾದ ಸುರೇಶ ಬೆದರೆ ಹಾಗೂ ಸಹಾಯ ಆಯುಕ್ತರಾದ ಶ್ರೀ ಆರ್ ಎಮ ಕುಲಕರ್ಣಿ, ಪಾಲಿಕೆಯ ವೈದ್ಯರಾದ ಶ್ರೀಮತಿ ಮೂಲಿಮನಿ ಹಾಗೂ ಆಸ್ಪತ್ರೆಯ ಸಿಬ್ಬಂದಿ ಹಾಜರಿದ್ದರು.

Related Articles

Leave a Reply

Your email address will not be published. Required fields are marked *