Jannah Theme License is not validated, Go to the theme options page to validate the license, You need a single license for each domain name.
ರಾಜ್ಯ

ವಾಹನ ಸಂಚಾರಿ ನಿಯಮ ಉಲ್ಲಂಘನೆ 50% ಡಿಸ್ಕೌಂಟ್‌ಗೆ ಇಂದೆ ಕೊನೆಯ ದಿನ!

State

POWERCITY NEWS:ಹುಬ್ಬಳ್ಳಿ: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದ ವಾಹನ ಸವಾರರಿಗೆ ದಂಡ ಕಟ್ಟಲು ಶೇ.50%ರಷ್ಟು ರಿಯಾಯಿತಿ ನೀಡಿ ಈ ಹಿಂದೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇಂದು ಟ್ರಾಫಿಕ್ ದಂಡ ರಿಯಾಯಿತಿ ಪಾವತಿಗೆ ಕೊನೆ ದಿನವಾಗಿದೆ.

ಹೌದು ಜುಲೈ 6 ರಿಂದ ಸೆ.9ರವರೆಗೆ ಟ್ರಾಫಿಕ್ ದಂಡ ಪಾವತಿಗೆ 2ನೇ ಬಾರಿ ಅವಕಾಶ ಕಲ್ಪಿಸಲಾಗಿತ್ತು. ಸದ್ಯ ಗಡವು ಮುಗಿದಿದ್ದು ಇಂದು ದಂಡ ಪಾವತಿಗೆ ಕೊನೆಯ ದಿನವಾಗಿದೆ. ಹೀಗಾಗಿ ಇಂದೇ ದಂಡ ಪಾವತಿ ಮಾಡಿದರೆ 50% ರಿಯಾಯಿತಿ ಸಿಗಬಹುದು ಎನ್ನಲಾಗಿದೆ.

ಇ ಬಗ್ಗೆ “ಪವರ್ ಸಿಟಿ ನ್ಯೂಸ್ ನೊಂದಿಗೆ ಮಾತನಾಡಿದ ಸಂಚಾರಿ ವಿಭಾಗದ ಡಿಸಿಪಿ ರವೀಶ್ ಸಿ ಆರ್ ಅವರು ಸರ್ಕಾರದ ಆದೇಶ ಬಂದರೆ ದಂಡದ 50%ರಿಯಾಯಿತಿ ಮುಂದುವರೆಯುತ್ತದೆ.ಇಲ್ಲವಾದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ದಂಡದ ಮೊತ್ತ ಯಥಾಪ್ರಕಾರವೆ ಇರುತ್ತೆ ಎಂದಿದ್ದಾರೆ.ಜುಲೈ 6 ರಿಂದ ಸೆ.9ರವರೆಗೆ ಟ್ರಾಫಿಕ್ ದಂಡ ಪಾವತಿಗೆ 2ನೇ ಬಾರಿ ಅವಕಾಶ ನೀಡಲಾಗಿತ್ತು. ಸದ್ಯ ಗಡವು ಮುಗಿದಿದ್ದು ಇಂದು ದಂಡ ಪಾವತಿಗೆ ಕೊನೆ ದಿನವಾಗಿದೆ.

ಇಂದೇ ನಿಮ್ಮ ವಾಹನಕ್ಕೆ ಸಂಚಾರಿ ನಿಯಮ ಉಲ್ಲಂಘನೆಯ ದಂಡ ಇದಿಯಾ ಎಂಬುದನ್ನ ಹತ್ತಿರದ ಸಂಚಾರಿ ಪೊಲಿಸ್ ಠಾಣೆಗೆ ಭೇಟಿ ನೀಡಿ ಖಾತ್ರಿಪಡಿಸಿಕೊಳ್ಳಿ!

Related Articles

Leave a Reply

Your email address will not be published. Required fields are marked *