Jannah Theme License is not validated, Go to the theme options page to validate the license, You need a single license for each domain name.
BREAKING NEWSCITY CRIME NEWSFestival Ganesh chaturthiLife StyleProtestTWINCITY

ಇಂದಿನಿಂದ ನಗರದಲ್ಲಿ ದಾಂಡಿಯಾ (ಗರ್ಭಾ)ಉತ್ಸವ!

Dandiya dance

POWER CITYNEWS : HUBLIಹುಬ್ಬಳ್ಳಿ: ಪ್ರಕೃತಿ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಫೌಂಡೇಶನ್ ವತಿಯಿಂದ ಅ.5 & ಅ.6 ರಂದು ಗರಭಾ (ದಾಂಡಿಯಾ) ಉತ್ಸವ 2024 ನ್ನು ನಗರದಲ್ಲಿ ಆಯೋಜಿಸಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ಪರಶುರಾಮ ಪೂಜಾರ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದಿಂದ ಇಲ್ಲಿನ ತೋಳನಕೆರೆಯಲ್ಲಿ ಸಂಸ್ಥೆಯ ವತಿಯಿಂದ ಗರಭಾ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಅದರಂತೆ ಈ ವರ್ಷ ಎರಡು ಸ್ಥಳಗಳಲ್ಲಿ ಗರಭಾ ಉತ್ಸವ ಆಯೋಜಿಸಲಾಗಿದೆ. ಅ.5 ರಂದು ಸಂಜೆ 6 ಕ್ಕೆ ತೋಳನಕೆರೆ ಹಾಗೂ ಅ. 6 ರಂದು ಸಂಜೆ 6 ಕ್ಕೆ ಬಾಲಾಜಿ ಆಸ್ಪತ್ರೆ ಎದುರಿನ ಕಲ್ಲೂರ ನಲ್ಲಿನ ಪ್ರಕೃತಿ ಸ್ಪೋರ್ಟ್ಸ್ ಫೌಂಡೇಶನ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು‌.

ಅಂದು ಕಾರ್ಯಕ್ರಮದಲ್ಲಿ ಬೆಸ್ಟ್ ಗ್ರೂಪ್ ಡ್ಯಾನ್ಸ್, ಬೆಸ್ಟ್ ಕಪಲ್, ಬೆಸ್ಟ್ ಕಾಸ್ಟೂಮ್, ಎನರ್ಜನಿಕ್ ಗ್ರೂಪ್ ಹೀಗೆ ನಾನಾ ವಿಭಾಗದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಗರಭಾ ಉತ್ಸವದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿಪಕ್ಷ ಉಪ ನಾಯಕರಾದ ಅರವಿಂದ ಬೆಲ್ಲದ್, ಮಾಜಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ, ಶಾಸಕ ಮಹೇಶ ಟೆಂಗಿನಕಾಯಿ, ಮುಖಂಡರಾದ ಗೋವಿಂದ ಜೋಶಿ, ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ್, ಹು-ಧಾ ಸ್ಮಾರ್ಟ್ ಸಿಟಿ ಎಂಡಿ ರುದ್ರೇಶ ಘಾಳಿ, ಪಾಲಿಕೆ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ಸೇರಿದಂತೆ ನಗರದ ವಿವಿಧ ಗಣ್ಯಮಾನ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಮಧುಚಂದ್ರ ಅಚ್ಚಳ್ಳಿ, ನಿರ್ದೇಶಕರಾದ ವಿವೇಕ ಪರಮಾದಿ, ರಾಕೇಶ್ ಅಚ್ಚಳ್ಳಿ, ಅಮೀತ ಪೂಜಾರ, ಸಾಹುಲ್, ಪ್ರಶಾಂತ ಸೇರಿದಂತೆ ಮುಂತಾದವರು ಇದ್ದರು.

Related Articles

Leave a Reply

Your email address will not be published. Required fields are marked *