Jannah Theme License is not validated, Go to the theme options page to validate the license, You need a single license for each domain name.
ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

A K ಪಾಟೀಲರ ಆರೋಗ್ಯದಲ್ಲಿ ಚೇತರಿಕೆ!

Powercity news/ಹುಬ್ಬಳ್ಳಿ

ಸದಾ ತಮ್ಮದೆ ಆದ ಆಯ್ಕೆಯ ಹಾಡುಗಳನ್ನು ಹಾಡುವ ಮೂಲಕ ಮತ್ತು ವಿಭಿನ್ನವಾದ ಶಾಯರಿ ಗಳನ್ನ ಹೇಳುವ ಮೂಲಕ ಕಾರ್ಯಕರ್ತರು,ಹಾಗೂ ಅಭಿಮಾನಿಗಳನ್ನು ರಂಜಿಸುತ್ತ ಹಸನ್ಮುಖಿಯಾಗಿಯೆ ಜನಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಿದ್ದ ಹಾಗೂ ಪಕ್ಷ ಸಂಘಟನೆಗಾಗಿ ದುಡಿಯುತ್ತಿರುವ ಸರಳ ರಾಜಕಾರಣಿಗಳಾದ ಮಾಜಿ ಮೇಯರ್ ಪ್ರಸ್ತುತ ಧಾರವಾಡ ಜಿಲ್ಲಾ ಕಾಂಗ್ರೆಸ್ ಗ್ರಾಮಿಣ ಅಧ್ಯಕ್ಷರು ಆದ ಅನಿಲಕುಮಾರ ಪಾಟೀಲ ಅವರು ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದರು.

ಆದರೆ ಇದೀಗ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು ಶೀಘ್ರದಲ್ಲೇ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬರಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

ಕಳೆದ ಒಂಬತ್ತನೇ ತಾರೀಖಿನಂದು ಎದೆಯಲ್ಲಿ ತೀವ್ರ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅನಿಕುಮಾರ ಪಾಟೀಲ ಅವರನ್ನು ಚಿಕಿತ್ಸೆ ಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದರಿಂದ ಅವರ ಅಭಿಮಾನಿಗಳು ಹಾಗೂ ಪಕ್ಷದ ಮುಖಂಡರು ಸೇರಿದಂತೆ ನೂರಾರು ಕಾರ್ಯಕರ್ತರು ಆಸ್ಪತ್ರೆಗೆ ಅಗಮಿಸಿ ಅನಿಲ ಕುಮಾರ್ ಪಾಟೀಲ ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *