Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಡಿಮ್ಹಾನ್ಸ ಮುಂದಿನ ಕತ್ತಲೆ ರಸ್ತೆಗೆ ಮುಕ್ತಿ- ಪವರ್ ಸಿಟಿ‌ನ್ಯೂಸ್ ಬಿಗ್ impact

ಧಾರವಾಡ

ಧಾರವಾಡ ಉಪನಗರ ಠಾಣೆ ಮುಂದೆ ಇರುವ ಬೆಳಗಾವಿ ರಸ್ತೆಯಲ್ಲಿರುವ ಡಿಮ್ಹಾನ್ಸ ಆಸ್ಪತ್ರೆ ಮುಂದಿನ ಕತ್ತಲೆಯ ರಸ್ತೆಗೆ ಕೊನೆಗೂ ಮುಕ್ತಿ ಸಿಕ್ಕಂತೆ ಆಗಿದೆ.

ಈ ರಸ್ತೆ ಕತ್ತಲೆಯಾದ್ರೂ ಸಾಕು ಅಪಘಾತಗಳ ತಾಣವಾಗಿತ್ತು. ಡಿಮ್ಹಾನ್ಸ ಆಸ್ಪತ್ರೆಗೆ ಬರುವ ಅದೇಷ್ಟೊ ರೋಗಿಗಳು ವಾಹನ ಸವಾರರಿಂದ ಅಪಘಾತಕ್ಕೆ ಒಳಗಾದ ಉದಾಹರಣೆಗಳು ಆಗಿವೆ.

ಈ‌ ಬಗ್ಗೆ ಪವರ್ ಸಿಟಿ‌ನ್ಯೂಸ್ ಕನ್ನಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ಹಾಗೂ ಕೆಇಬಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು‌ ಸುದ್ದಿ ಪ್ರಸಾರ ಮಾಡಿತ್ತು.

ಈ ಬಗ್ಗೆ ಎಚ್ಚೆತ್ತಕೊಂಡಿದ್ದ ಅಧಿಕಾರಿಗಳು ಮೊದಲು ಉಪನಗರ ಠಾಣೆ ಮುಂದಿನ ಹೈಮಾಸ್ಕ ದೀಪ ಸರಿ ಮಾಡಿ, ಪೊಲೀಸ್ ಠಾಣೆ ಮುಂದೆ ನಡೆಯುತ್ತಿದ್ದ ಅಪಘಾತಗಳಿಗೆ ಕಡಿವಾಣ ಹಾಕಿದ್ದರು.

ಇದೀಗ ಡಿಮ್ಹಾನ್ಸ ಮುಂದಿನ ರಸ್ತೆಗೆ ಕತ್ತಲೆಯಿಂದ ಮುಕ್ತಿ ಕೊಟ್ಟು ದಾರಿಯುದ್ದಕ್ಕೂ ವಿದ್ಯೂದೀಪಗಳು ಬೆಳಗುವಂತೆ ಮಾಡಿದ್ದಾರೆ.

ಜನರು ಸಮಸ್ಯೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಕೆಇಬಿ ಹಿರಿಯ ಅಧಿಕಾರಿಗಳು ಸ್ಪಂದಿಸಿ, ಸಮಸ್ಯೆಯನ್ನು ಬಗೆಹರಿಸಿಕೊಟ್ಟಿದ್ದಾರೆ.

ಇದು ಪವರ್ ಸಿಟಿ ನ್ಯೂಸ್ ಕನ್ನಡ್ ಬಿಗ್ ಇಂಫ್ಯಾಕ್ಟ….

Related Articles

Leave a Reply

Your email address will not be published. Required fields are marked *