Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ತವರಿಗೆ ಬಂದ ಆರ್ಮಿಯ ಪೈಲ್ವಾನ್ ಗೆ ಸಚಿವರಿಂದ ಆತ್ಮೀಯ ಸನ್ಮಾನ

ಧಾರವಾಡ

ಭಾರತೀಯ ಸೈನ್ಯದಲ್ಲಿ ಕುಸ್ತಿಯಿಂದಲೇ ಹೆಸರು ಮಾಡಿರುವ ಪೇಢಾ ನಗರಿ‌ ಧಾರವಾಡ ಜಿಲ್ಲೆಯ ಪೈಲ್ವಾನ್ ರಫಿಕ ಹೊಳಿ ತವರು ಜಿಲ್ಲೆ ಧಾರವಾಡಕ್ಕೆ ಬಂದಿದ್ದು, ಜಿಲ್ಲಾ ಉಸ್ತುವಾರಿ‌ ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಅವರು ಆತ್ಮೀಯ ಸನ್ಮಾನ‌ ಮಾಡಿದ್ದಾರೆ.

ಮೊನ್ನೆಯಷ್ಟೆ ದೆಹಲಿಯಲ್ಲಿ ನಡೆದ ಇಂಟರ್ ಸರ್ವಿಸಸ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬಂಗಾರದ ಪದಕ ಗೆದ್ದಿದ್ರು ರಫಿಕ ಹೋಳಿ.

ದೇಶದ ನಾನಾ ರಾಜ್ಯಗಳ ಪ್ರತಿಭಾವಂತ ಕುಸ್ತಿ ಪಟುಗಳು ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು.

ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದಿದ್ದ ರಫಿಕ್ ಅವರು ತೀರಿ ಹೋಗಿರುವ ತಮ್ಮ ತಾಯಿಗೆ ಚಿನ್ನದ ಪದಕ ಅರ್ಪಣೆ ಮಾಡಿದ್ದರು.

ರಫಿಕ್ ಸದ್ಯ ಪೂನಾದಲ್ಲಿ ಸೇನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *