Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ದಿವಂಗತ ಮಾಜಿ ಸಿಎಂ ಎಸ್.ಆರ್ ಬೊಮ್ಮಾಯಿ ಅವರ 100 ನೇ ಜನ್ಮದಿನಾಚರಣೆ ಆಚರಣೆ

ಹುಬ್ಬಳ್ಳಿ

ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಹಾಗೂ ಕೇಂದ್ರ ಮಾನವ ಸಂಪನ್ಮೂಲಗಳ ಮಾಜಿ ಸಚಿವರಾಗಿದ್ದ ದಿವಂಗತ. ಶ್ರೀ ಎಸ್.ಆರ್. ಬೊಮ್ಮಾಯಿ ರವರ 100 ನೇ ಜನ್ಮದಿನವನ್ನು ಹುಬ್ಬಳ್ಳಿಯಲ್ಲಿ ಆಚರಿಸಲಾಯಿತು.

ಶ್ರೀ ಎಸ್.ಆರ್. ಬೊಮ್ಮಾಯಿ ರವರ ಜನ್ಮದಿನದ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರು ಹುಬ್ಬಳ್ಳಿಯಲ್ಲಿರುವ ಅವರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಸಭಾನಾಯಕರಾದ ಶ್ರೀ ತಿಪ್ಪಣ್ಣ ಮಜ್ಜಿಗಿ ರವರು, ಪಾಲಿಕೆಯ ಸದಸ್ಯರಾದ ಶ್ರೀ ರಾಜಣ್ಣ ಕೊರವಿ ರವರು, ಶ್ರೀ ಉಮೇಶಗೌಡ ಕೌಜಗೇರಿ ರವರು, ಮಾಜಿ ಮಹಾಪೌರರಾದ ಶ್ರೀ ಪಾಂಡುರಂಗ ಪಾಟೀಲ ರವರು, ಶ್ರೀ ವಿಜಯಾನಂದ ಹೊಸಕೋಟಿ ರವರು, ಪಾಲಿಕೆಯ ಅಧಿಕಾರಿಗಳಾದ ಶ್ರೀ ಎಸ್.ಸಿ. ಬೇವುರ ರವರು, ಶ್ರೀ ಆನಂದ ಕಾಂಬ್ಳೆ ರವರು, ಶ್ರೀ ದಂಡಪ್ಪನವರ ರವರು, ಹಾಗೂ ಪ್ರಮುಖ ಗುರುಹಿರಿಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *