Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ನವನಗರದಲ್ಲಿ ಪಾಲಿಕೆ ಜಾಗದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಸ್ಥಾಪನೆಗಾಗಿ ಸ್ಥಳ ಪರಿಶೀಲನೆ

ಧಾರವಾಡ

ನವನಗರದ ಪಾಲಿಕೆಯ ಜಾಗದಲ್ಲಿ ಮಹಾನಗರದ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 25 ಲಕ್ಷ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ಗಳನ್ನು ಕಟ್ಟಲು, ಮಹಾನಗರ ಪಾಲಿಕೆಯ ಸದಸ್ಯರು, ಮಹಾನಗರ ಪಾಲಿಕೆಯ ಅಧಿಕಾರಿಗಳು, ಹಾಗೂ ಎಲ್&ಟಿ ಅಧಿಕಾರಿಗಳೊಂದಿಗೆ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಈರೇಶ ಅಂಚಟಗೇರಿ ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಉಪ ಮಹಾಪೌರರಾದ ಶ್ರೀಮತಿ ಉಮಾ ಮುಕುಂದ, ಪಾಲಿಕೆಯ ಸಭಾನಾಯಕರಾದ ತಿಪ್ಪಣ್ಣ ಮಜ್ಜಿಗಿ, ಪಾಲಿಕೆಯ ಆಯುಕ್ತರಾದ ಗೋಪಾಲಕೃಷ್ಣ , ಪಾಲಿಕೆಯ ಸದಸ್ಯರಾದ ಶ್ರೀಮತಿ ಸುನೀತಾ ಮಾಳವಡಕರ, ಪಾಲಿಕೆಯ ಸಹಾಯಕ ಆಯುಕ್ತರಾದ ರಮೇಶ ನೂಲ್ವಿ, ಹಾಗೂ ಎಲ್&ಟಿ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *