Jannah Theme License is not validated, Go to the theme options page to validate the license, You need a single license for each domain name.
ಧಾರವಾಡಸ್ಥಳೀಯ ಸುದ್ದಿಹುಬ್ಬಳ್ಳಿ

ಬಸ್ ಕಂದಕಕ್ಕೆ ಬಿದ್ದು ತಪ್ಪಿತು ಭಾರಿ ಅನಾಹುತ !

ಹುಬ್ಬಳ್ಳಿ

ನವಲಗುಂದ ಬಳಿ ಬಸ್ ಅಪಘಾತದಲ್ಲಿ ಇಳಿ ವಯಸ್ಸಿನ(101) ಅಜ್ಜಿ ಸಹಿತ 9ಕ್ಕೂ ಹೆಚ್ಚು ಜನರಿಗೆ ಗಾಯ.

ಧಾರವಾಡ ದಿಂದ ನವಲಗುಂದ ಮೂಲಕ ರೊಣ ಬಸ್ ನಿಲ್ದಾಣ ಕ್ಕೆ ತಲುಪ ಬೇಕಿದ್ದ ಕೆ ಎಸ್ ಆರ್ ಟಿ ಸಿ ಬಸ್ಸೊಂದು ನವಲಗುಂದ ಬಳಿಯ ಕುಮಾರ ಕೊಪ್ಪ ಕ್ರಾಸ್ ಬಳಿ ಅಪಘಾತಕ್ಕಿಡಾದ ಘಟನೆ ನಡೆದಿದೆ.

ಗಾಯಗೊಂಡ ಇಳಿ ವಯಸ್ಸಿನ(101)ರ ಅಜ್ಜಿ

ಇಂದು ಬೆಳಿಗ್ಗೆ 8: 40ರ ಸುಮಾರಿಗೆ ನವಲಗುಂದ ಸಮೀಪದ ಕುಮಾರ ಕೊಪ್ಪ ಕ್ರಾಸ್ ಬಳಿ ಬೈಕ್ ಸವಾರನೊಬ್ಬ ಎಕಾಏಕಿ ಬಸ್ಸಿಗೆ ಅಡ್ಡಲಾಗಿ ಸಂಚರಿಸಿದ್ದಾನೆ.ಇದರಿಂದ ಆತನನ್ನು ಉಳಿಸಲು ಪ್ರಯತ್ನಿಸಿದ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಬ್ರೀಡ್ಜ ವೊಂದರ ಕಂದಕಕ್ಕೆ ಜಾರಿದೆ.ಇದರಿಂದ ಸಂಭವಿಸ ಬಹುದಾದ ದೊಡ್ಡ ಪ್ರಮಾಣದ ಸಾವು ನೋವು ತಪ್ಪಿದೆ.

ಬಸ್ಸಿನಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.ಇದರಿಂದ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳಿಯ ಆಸ್ಪತ್ರೆಗೆ ರವಾನಿಸಲಾಗಿದೆ.

ಇನ್ನೂ ಬಸ್ ರೊಣ ಡಿಪೋ ಗೆ ಸೇರಿದ್ದು ಬಸ್ ಚಾಲಕನನ್ನು ಶರಣಪ್ಪ ಕಡಿವಾಳ ಮತ್ತು ನಿರ್ವಾಹಕ ಮೂಶಣ್ಣ ಆರ್ ಲಿಂಗರೆಡ್ಡಿಗೂ ಕೂಡ ಗಾಯಗಳಾಗಿವೆ.ಸ್ಥಳಕ್ಕೆ ನವಲಗುಂದ ಪೊಲಿಸರು ಆಗಮಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *