Jannah Theme License is not validated, Go to the theme options page to validate the license, You need a single license for each domain name.
BREAKING NEWSDHARWADHubballiTWINCITYಧಾರವಾಡರಾಜ್ಯಹುಬ್ಬಳ್ಳಿ

ಬಾಸ್ಕೆಟ್‌ಬಾಲ್ ನೈಋತ್ಯ ರೈಲ್ವೆ ರನ್ನರ್ ಅಪ್!

Dakhani

PowerCityNewsHubli ಹುಬ್ಬಳ್ಳಿ: ಸಿಕಂದರಾಬಾದ್‌ನಲ್ಲಿ ದಕ್ಷಿಣ ಮಧ್ಯ ರೈಲ್ವೆ ಸ್ಪೋರ್ಟ್ಸ್ ಅಸೋಸಿಯೇಷನ್‌ ಇತ್ತೀಚೆಗೆ ಆಯೋಜಿಸಿದ್ದ 47ನೇ ಅಖಿಲ ಭಾರತ ಅಂತರ ರೈಲ್ವೆ ಮಹಿಳಾ ಬ್ಯಾಸ್ಕೆಟ್ ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ನೈಋತ್ಯ ರೈಲ್ವೆ ವಲಯದ ತಂಡ ಉತ್ತಮ ಪ್ರದರ್ಶನ ತೋರಿದೆ.


ತಂಡದ ನಾಯಕಿ ಅನುಷಾ ಐ.ಪಿ. ಮತ್ತು ತರಬೇತುಗಾರ್ತಿ ಝರಿನ್ ಪಿ.ಎಸ್. ನೇತೃತ್ವದ ನೈಋತ್ಯ ರೈಲ್ವೆ ಮಹಿಳಾ ಬಾಸ್ಕೆಟ್ ಬಾಲ್ ತಂಡ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ರನ್ನರ್ ಅಪ್ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಪ್ರಭಾವ ಬೀರಿದೆ.

ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಸ್ಥಾನವನ್ನು ದಕ್ಷಿಣ ಮಧ್ಯ ರೈಲ್ವೆ ಪಡೆದುಕೊಂಡರೆ, ನೈಋತ್ಯ ರೈಲ್ವೆ ಎರಡನೇ ಸ್ಥಾನ ಮತ್ತು ಮೂರನೇ ಸ್ಥಾನವನ್ನು ಮಧ್ಯ ರೈಲ್ವೆ ಪಡೆದುಕೊಂಡಿದೆ. ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಅರವಿಂದ ಶ್ರೀವಾಸ್ತವ ಅವರು, ನೈಋತ್ಯ ರೈಲ್ವೆ ತಂಡವನ್ನು ಅಭಿನಂದಿಸಿದರು.

Related Articles

Leave a Reply

Your email address will not be published. Required fields are marked *