Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಸಂತೋಷ ಲಾಡ ತವರು ಕ್ಷೇತ್ರದಲ್ಲಿ ಬೃಹತ್ ಕೈಗಾರಿಕೆಗೆ ಸಿದ್ಧತೆ ನಡೆಸಿದ ಶ್ರೀಲಂಕಾದ ಖ್ಯಾತ ಮಾಜಿ ಕ್ರಿಕೆಟಿಗ

ಧಾರವಾಡ

ಧಾರವಾಡ ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಖ್ಯಾತ ಕ್ರಿಕೆಟಿಗ ಮುತ್ತಯ್ಯಾ ಮುರಳಿಧರನ್ ಸುಮಾರು 900 ಕೋಟಿ ರೂಪಾಯಿ ವೆಚ್ಚ ಮಾಡಿ ತಂಪು ಪಾನೀಯ ಘಟಕದ ಕಂಪನಿಯನ್ನು ಸ್ಥಾಪನೆ ಮಾಡಲು ಮುಂದಾಗಿದ್ದಾರೆ.

ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಪ್ರತಿನಿಧಿಸುವ ಕಲಘಟಗಿ ಮತಕ್ಷೇತ್ರ ಹಾಗೂ ಧಾರವಾಡ ತಾಲೂಕಿನ ಮುಮಿಗಟ್ಟಿಯಲ್ಲಿ ಸುಮಾರು 50 ರಿಂದ 60 ಎಕರೆ ಕೆಐಎಡಿಬಿ ಜಮೀನಿನಲ್ಲಿ ಕಂಪನಿ ಶುರು ಮಾಡಲು ಮುಂದಾಗಿದ್ದಾರೆ.

ಇದಕ್ಕಾಗಿ ಈಗಾಗಲೇ ದೂರದ ಶ್ರೀಲಂಕಾ ದೇಶದಿಂದ ಬಂದು ಮುತ್ತಯ್ಯಾ ಮುರಳಿಧರನ್ ಸ್ಥಳ ಪರಿಶೀಲನೆ ಮಾಡಿ ಹೋಗಿದ್ದಾರೆ.

ನಮ್ಮ‌ಭಾಗದ ಯುವಕರಿಗೆ ಉದ್ಯೋಗ ಸೃಷ್ಟಿ ಆಗುತ್ತೆ. ಇದೊಂದು ಒಳ್ಳೆಯ ಬೆಳವಣಿಗೆ ಅಂತಾರೆ ಮುಮ್ಮಿಗಟ್ಟಿ ಗ್ರಾಮದ ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು.

Related Articles

Leave a Reply

Your email address will not be published. Required fields are marked *