Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಧಾರವಾಡದ ವಿವಿಧ ವಾರ್ಡಗಳಲ್ಲಿ ಮೇಯರ್ ಸಭೆ

ಧಾರವಾಡ

ಇಂದು ಪಾಲಿಕೆಯ ಸದಸ್ಯರು ಹಾಗೂ ಸ್ಥಳೀಯ ನಾಗರಿಕರ ಮನವಿಯ ಮೇರೆಗೆ, ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು, ಧಾರವಾಡದ ಆರೋಗ್ಯನಗರ ಹಾಗೂ ಮಾಕಡವಾಲೆ ಪ್ಲಾಟಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ, ಸಾರ್ವಜನಿಕ ಸಭೆಯನ್ನು ಏರ್ಪಡಿಸಲಾಗಿತ್ತು.


ಪ್ರಾಥಮಿಕವಾಗಿ ಕುಡಿಯುವ ನೀರು ಹಾಗೂ ಬೀದಿ ದೀಪಗಳ ವ್ಯವಸ್ಥೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು. ಹಾಗೂ ಅಲ್ಲಿನ ನಾಗರಿಕರು ಸ್ವಚ್ಛತೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತಾಗಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದರ ಬಗ್ಗೆ ಭರವಸೆ ನೀಡಲಾಯಿತು. ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ಕವಿತಾ ಕಬ್ಬೆರ ರವರು, ವಲಯ ಅಧಿಕಾರಿಗಳಾದ ಮನೋಜ್ ಗಿರೀಶ, ಲಕ್ಷ್ಮಣ ಹೂಗಾರ ರವರು, ಸಾವಂತ ಡಂಬಳ ರವರು, ಶ್ರೀಧರ ಯಾದವಾಡ, ನಾಗರಾಜ, ಶ್ರೀ ರೆಡ್ಡಿ ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *