Jannah Theme License is not validated, Go to the theme options page to validate the license, You need a single license for each domain name.
ಧಾರವಾಡಸ್ಥಳೀಯ ಸುದ್ದಿ

ವೇಗದ ಚಿಗರಿಗೆ ಅಡ್ಡ ಬಂದ ಕಾರು ನಜ್ಜು-ಗುಜ್ಜು!

power city news:-

ಧಾರವಾಡ: ಚಿಗರಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತವಾಗಿದ್ದು.
ಕಾರಿ ನಲ್ಲಿದ್ದ ವ್ಯಕ್ತಿಯೊಬ್ಬರಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಇಲ್ಲಿನ ಸುವರ್ಣ ಪೆಟ್ರೋಲ್ ಪಂಪ್ ಬಳಿನಡೆದಿದೆ.

ಜಿಟಿ ಜಿಟಿ ಮಳೆಯಲ್ಲಿ ವೇಗವಾಗಿ ಬರುತ್ತಿದ್ದ ಚಿಗರಿ ಬಸ್ಸಿಗೆ ಅಡ್ಡಲಾಗಿ ಬಂದ ಕಾರಿಗೆ ಚಿಗರಿ ಬಸ್ ಡಿಕ್ಕಿ ಹೊಡೆದಿದೆ ಇದರಿಂದ ನಿಯಂತ್ರಣ ತಪ್ಪಿದ ಚಿಗರಿ ಬಸ್ಸು ಬ್ಯಾರಿಕೇಡ ಮುರಿದು ಸರ್ವಿಸ್ ರಸ್ತೆಯ ಪಕ್ಕಕ್ಕೆ ನಿಂತಿದೆ. ವೇಗದಲ್ಲಿದ್ದ ಚಿಗರಿ ಬಸ್ ಹೊಡೆತಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಇನ್ನೂ ಕಾರ್ ನಲ್ಲಿದ್ದವರ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿಲ್ಲ ವಾದರು ಕಾರು ಚಾಲಕ ಧಾರವಾಡ ದಿಂದ ಹುಬ್ಬಳ್ಳಿಯ ಕಡೆಗೆ ಹೊರಟಿದ್ದರು ಎನ್ನಲಾಗಿದೆ.

ಅಪಘಾತದಲ್ಲಿ ಗಾಯಗೊಂಡ ಓರ್ವನನ್ನು ಧಾರವಾಡದ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು. ಸ್ಥಳಕ್ಕೆ ಸಂಚಾರಿ ಪೊಲಿಸರು ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *