ಸ್ಥಳೀಯ ಸುದ್ದಿ

ಕಾಂಗ್ರೆಸ್ ಸರ್ಕಾರದ ಬಜೆಟ್ ಅಭಿವೃದ್ಧಿ ಹಾಗೂ ಬಡವರ ಪರ- ಶಾಸಕ ವಿನಯ ಕುಲಕರ್ಣಿ ಅಭಿಪ್ರಾಯ

ಬೆಂಗಳೂರು

ರಾಜ್ಯದ ಈ ಬಾರಿ ಬಜೆಟ್ ಉತ್ತಮವಾಗಿದ್ದು, ಚುನಾವಣೆಗೂ ಮೊದಲು ಕಾಂಗ್ರೆಸ್ ಪಕ್ಷ ನುಡಿದಂತೆ 5 ಪ್ರನಾಳಿಕೆ ಪೂರೈಕೆ ಮಾಡುವ ಇಚ್ಚೆಯೊಂದಿಗೆ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿ ಪರ ಬಜೆಟ್ ಮಂಡನೆ ಮಾಡಿರುವುದು ನಮ್ಮ ಹೆಮ್ಮೆ ಎಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಸ್ ಕೇಂದ್ರ ಆರಂಭ ಮಾಡುವುದರ ಜೊತೆಗೆ, ದಿವಂಗತ ಡಾ.ಪುನೀತ ರಾಜಕುಮಾರ ಹೆಸರಿನಲ್ಲಿ ಹೃಯದದ‌ ಸಮಸ್ಯೆ ಇರುವವರಿಗೆ ಚಿಕೆತ್ಸೆಗೆ ಅನುಕೂಲವಾಗಲು ಹೊಸ ಯಂತ್ರೋಪಕರಣ ಅಳವಡಿಸಲಾಗುವುದು ಎಂದಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ 30 ಸಾವಿರ ಕೋಟಿ ಅನುದಾನ. ಮೆಡಿಕಲ್ ಹಾಗೂ ಎಂಜಿನಿಯರಿಂಗ್ ಓದಲು ಸಹಾಯಧನ ಕೊಟ್ಟಿರುವುದು ಸ್ವಾಗತಾರ್ಹ.

ಬುಡಕಟ್ಟು ಪಂಗಡಗಳಿಗೆ ಇಡಿ ವರ್ಷ ಪೌಷ್ಠಿಕ ಆಹಾರ ವಿತರಣೆ,
ರೈತರಿಗೆ ಅನುಕೂಲವಾಗಲು ಕೇಂದ್ರದ ಎಪಿಎಂಸಿ ಕಾಯ್ದೆಯನ್ನು ವಾಪಸ್ ಪಡೆದಿರುವುದು ಸ್ವಾಗತಾರ್ಹ.

ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ 18038 ಕೋಟಿ ಅನುದಾನ ಮೀಸಲಿಡಲಾಗಿದೆ.

ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಶೇ.2 ರಷ್ಟು ಬಡ್ಡಿದರಲ್ಲಿ ಒಟ್ಟು 1. ಲಕ್ಷದವರೆಗೆ ಸಾಲ.

ರೇಷ್ಮೆ ಬೆಳೆಗಾರರಿಗೆ (೦)ಶೂನ್ಯ ಬಡ್ಡಿ ದರದಲ್ಲಿ 5. ಲಕ್ಷದವರೆಗೂ ಸಾಲ ಕೊಡಲು ನಿರ್ಧಾರ.

75 ಕೋಟಿ ವೆಚ್ಚದಲ್ಲಿ ರೇಶ್ಮೆ ಮಾರುಕಟ್ಟೆ ಸ್ಥಾಪನೆಗೆ ನಿರ್ಧಾರ.

7 ಜಿಲ್ಲೆಗಳಲ್ಲಿ ಬುದ್ದಿಮಾಂದ್ಯ ಮಕ್ಕಳಿಗೆ ಮಕ್ಕಳ ವಸತಿ ಶಾಲೆ ಸ್ಥಾಪನೆ ಮಾಡುತ್ತಿರುವುದು ಸಂತೋಷದ ವಿಷಯ.

ಸಿಎಂ ಸಿದ್ದರಾಮಯ್ಯಾ ಅವರು ಈ ಬಾರಿ ಅಭಿವೃದ್ಧಿ ಪರ ಬಜೆಟ್ ಮಂಡನೆ ಮಾಡುವುದರ ಮೂಲಕ ಬಡವರ ಹಾಗೂ ರೈತರು ಶ್ರಮಿಕರ ಪರವಾಗಿ ನಿಂತಿದ್ದು, ಯಾವತ್ತಿಗೂ ಕಾಂಗ್ರೆಸ್ ಸರ್ಕಾರ ನುಡಿದಂತೆ‌ ಎಂದು ಶಾಸಕ ವಿನಯ‌ ಕುಲಕರ್ಣಿ ಅವರು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button