Jannah Theme License is not validated, Go to the theme options page to validate the license, You need a single license for each domain name.
ರಾಜಕೀಯರಾಜ್ಯಸ್ಥಳೀಯ ಸುದ್ದಿ

ಜನಸೇವೆಯೇ ನನ್ನ ಮೊದಲ ಕೆಲಸ :ಎಂ ಆರ್ ಪಾಟೀಲ್!

powercity news:

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಮತಕ್ಷೇತ್ರದ ಶಾಸಕ ಎಮ್.ಆರ್.ಪಾಟೀಲ್ ಅವರ ಜನಸಂಪರ್ಕ ಕಾರ್ಯಾಲಯ ಇಲ್ಲಿನ ಮಿನಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಉದ್ಘಾಟನೆ ಮಾಡಲಾಯಿತು.

ಕ್ಷೇತ್ರದ ಹಿರಿಯ ನಾಗರಿಕರು ಈ ಕಾರ್ಯಾಲಯವನ್ನು ರಿಬ್ಬನ್ ಕತ್ತಿರುವ ಮೂಲಕ ಶಾಸಕರ ಸಮ್ಮುಖದಲ್ಲಿ ಉದ್ಘಾಟನೆ ಮಾಡಿದರು. ಬಳಿಕ ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದಗೋಳ ರಾಜ್ಯದಲ್ಲಿಯೇ ಹಿಂದೂಳಿದ ತಾಲೂಲು ಎಂಬ ಹಣೆಪಟ್ಟಿ ಹೊತ್ತಿದೆ. ನಮ್ಮ ಕ್ಷೇತ್ರದಲ್ಲಿ ರೈತಾಪಿ ವರ್ಗವೇ ಹೆಚ್ಚಿದ್ದು, ಈ ಹಿನ್ನೆಲೆಯಲ್ಲಿ ಕ್ಷೇತ್ರವನ್ನು ಮಾದರಿ ಮಾಡುವ ಸಂಕಲ್ಪ ಹೊತ್ತಿದ್ದೇನೆ. ಹೀಗಾಗಿ ಜನರ ಅಹವಾಲು ಸ್ವೀಕಾರ ಮಾಡಲು ಹುಬ್ಬಳ್ಳಿಯ ಮಿನಿ ವಿಧಾನಸೌಧದಲ್ಲಿ ಜನಸಂಪರ್ಕ ಕಾರ್ಯಾಲಯ ತೆರೆಯಲಾಗಿದೆ. ಕ್ಷೇತ್ರದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನಾನು ಬದ್ದ ಎಂದು ಶಾಸಕರು ತಿಳಿಸಿದರು.
ಬಳಿಕ ವಿವಿಧ ಗಣ್ಯಮಾನ್ಯರು ಶಾಸಕರಿಗೆ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಾಲತೇಶ ಶಾಗೋಟಿ ರವಿಗೌಡ ಪಾಟೀಲ್, ನಿಂಗನಗೌಡ ಮರಿಗೌಡ್ರ್ ಚಂದ್ರಪ್ಪ ಬೆನ್ನಿ ಉಮೇಶ್ ಕುಸುಗಲ್ ಲಿಂಗರಾಜ್ ಮೆಣಸಿನಕಾಯಿ ಪ್ರತಾಪಗೌಡ ಪಾಟೀಲ್ ಎಸ್ ಡಿ ಮಾಳಗಿ ವಿಲಾಸ್ ಕುಲಕರ್ಣಿ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಕ್ಷೇತ್ರದ ಜನರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *