Jannah Theme License is not validated, Go to the theme options page to validate the license, You need a single license for each domain name.
BREAKING NEWSCITY CRIME NEWSHubballi

ವಸೂಲಿ ಮಾಡಲು ನಿಂತ ಮೇಸ್ತ್ರಿ ಮಾಡಿದ್ದೇನು!

POWER CITYNEWS : HUBBALLI

ಹುಬ್ಬಳ್ಳಿ: ಕೊಟ್ಟ ಮುಂಗಡ ಹಣಕ್ಕಾಗಿ ಅಣ್ಣ ತಮ್ಮಂದಿರನ್ನು ತನ್ನ ಬೆಂಬಲಿಗರೊಂದಿಗೆ ಕಟ್ಟಡ ನಿರ್ಮಾಣದ ಮೇಸ್ತ್ರಿಯೊಬ್ಬ ಮನಸ್ಸೊ ಇಚ್ಛೆ ಹಲ್ಲೆ ನಡೆಸಿದ ಘಟನೆ ಹಳೆಹುಬ್ಬಳ್ಳಿಯ ಆನಂದನಗರದಲ್ಲಿ ನಡೆದಿದೆ.

ಹಳೆಹುಬ್ಬಳ್ಳಿಯ ನಿವಾಸಿಯಾದ ಯಾಸೀನ ಬಳ್ಳಾರಿ ಎಂಬಾತ ಸಲ್ಮಾನ ಮೇಸ್ತ್ರಿ ಎಂಬಾತನ ಬಳಿ ಕೆಲಸಕ್ಕೆ ಬರುವುದಾಗಿ ಮುಂಗಡ ಹಣ ಪಡೆದಿದ್ದ.ಆದರೆ ಹಣ ಪಡೆದು ಸರಿಯಾಗಿ‌ ಕೆಲಸಕ್ಕೆ ಬರಲಿಲ್ಲವೆಂದು ಕ್ಯಾತೆ ತೆಗೆದ ಮೇಸ್ತ್ರಿ ಈ ಕೂಡಲೇ ಹಣ ಮರಳಿಸುವಂತೆ ದುಂಬಾಲು ಬಿದ್ದಿದ್ದನೆಂದು‌ ಹೇಳಲಾಗಿದೆ. ಇಂದು ಬೆಳಿಗ್ಗೆ ಹಳೆಹುಬ್ಬಳ್ಳಿಯ ಆನಂದ ನಗರದ ಹೊಟೆಲ್ ಒಂದರ‌ ಬಳಿ ನಿಂತಿದ್ದ ಯಾಸೀನ‌ನ್ನು ತಡೆದು ಹಣ ಕೊಡುವಂತೆ ಒತ್ತಾಯಿಸಿದ್ದಾರೆ.
ಇ ವೇಳೆ ಯಾಸೀನ ಜೊತೆಗೆ ಬಂದಿದ್ದ ಸಾದೀಕ ಪಾನವಾಲೆ ಮೇಸ್ತ್ರಿ ನಡುವೆ ವಾಗ್ವಾದ ನಡೆದಿದೆ. ಇದರಿಂದ ಕುಪಿತಗೊಂಡ ಸಲ್ಮಾನ್ ಮೇಸ್ತ್ರಿ ಹಾಗೂ ಆತನ ಬೆಂಬಲಿಗರು ಯಾಸಿನ ಬಳ್ಳಾರಿ ಹಾಗೂ ಆತನ ಸಹೋದರ ಸಂಭಂದಿ ಸಾದಿಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಘಟನೆಯಲ್ಲಿ ಸಾದಿಕನ ತಲೆಗೆ ತಿವ್ರವಾದ ಗಾಯವಾಗಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಘಟನೆಗೆ ಸಂಭಂದ ಪಟ್ಟಂತೆ ಹಳೆಹುಬ್ಬಳ್ಳಿ ಪೋಲಿಸ್ ಠಾಣೆಯ ಪೊಲೀಸರು ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೆಕಿದೆ.

Related Articles

Leave a Reply

Your email address will not be published. Required fields are marked *