BREAKING NEWSDHARWADರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ರಸ್ತೆಗೆ ಕಸ ಹಾಕಿದ್ರೆ ಮುಲಾಜಿಲ್ಲ… ದಂಡ ಗ್ಯಾರಂಟಿ, ಮನೆ ಬಾಗಿಲಿಗೇ ಬರುತ್ತೆ ರಿಟರ್ನ್ ಗಿಫ್ಟ್!”

DAKHANI

POWER CITYNEWS:HUBBALLI/ಧಾರವಾಡ:ರಸ್ತೆ ಪಕ್ಕದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವ ಸಾರ್ವಜನಿಕರಿಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ. ಕಸದ ರಾಶಿಯಲ್ಲಿ ಸಿಕ್ಕ ಚೀಟಿಯ ವಿಳಾಸದ ಆಧಾರದ ಮೇಲೆ ಕಸ ಎಸೆದವರ ಮನೆ ಪತ್ತೆ ಹಚ್ಚಿ, ದಂಡ ವಿಧಿಸುವುದರ ಜೊತೆಗೆ ಅವರು ಎಸೆದಿದ್ದ ಕಸವನ್ನೇ ಅವರ ಮನೆ ಬಾಗಿಲಿಗೆ ಮರಳಿ ಸುರಿದು ಬಿಸಿ ಮುಟ್ಟಿಸಿರುವ ಘಟನೆ ವಲಯ ಕಚೇರಿ 02 ರ ವ್ಯಾಪ್ತಿಯಲ್ಲಿ ನಡೆದಿದೆ.

🔍 ಕಸದಲ್ಲಿದ್ದ ಚೀಟಿಯೇ ಆಯ್ತು ಸಾಕ್ಷಿ!
ಮಾನ್ಯ ಆಯುಕ್ತರು, ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು (ಘ.ವ.ನಿ.), ವಲಯ ಆಯುಕ್ತರು ಹಾಗೂ ಪರಿಸರ ಅಭಿಯಂತರರ ಕಟ್ಟುನಿಟ್ಟಿನ ನಿರ್ದೇಶನದಂತೆ ಈ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ವಲಯ ಕಚೇರಿ 02 ರ ಹಿರಿಯ ಆರೋಗ್ಯ ನಿರೀಕ್ಷಕರಾದ ಶಾಂತಗೌಡ ಬಿರಾದಾರ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀಮತಿ ವಿದ್ಯಾಶ್ರೀ ಶಂಭುಲಿಂಗ ರಡ್ಡೇರ ಇವರ ನೇತೃತ್ವದಲ್ಲಿ ವಾರ್ಡ್ ನಂ 14 ಮತ್ತು 7 ರಲ್ಲಿ ರಸ್ತೆ ಪಕ್ಕದಲ್ಲಿ ಹಾಕಲಾಗಿದ್ದ ತ್ಯಾಜ್ಯವನ್ನು ಪರಿಶೀಲಿಸಲಾಯಿತು.


ಈ ವೇಳೆ ಕಸದ ರಾಶಿಯಲ್ಲಿ ದೊರೆತ ಚೀಟಿಗಳಲ್ಲಿದ್ದ ವಿಳಾಸದ ಸಹಾಯದಿಂದ ತ್ಯಾಜ್ಯ ಹಾಕಿದವರ ಮನೆಗಳನ್ನು ನಿಖರವಾಗಿ ಗುರುತಿಸಲಾಯಿತು. ರಸ್ತೆಯಲ್ಲಿ ಬೇಜವಾಬ್ದಾರಿಯಿಂದ ತ್ಯಾಜ್ಯ ಎಸೆದ ಸಾರ್ವಜನಿಕರಿಗೆ ಸ್ಥಳದಲ್ಲೇ ₹3,000/- ರೂಪಾಯಿ ದಂಡ ವಿಧಿಸಲಾಯಿತು.

🏠 ಮನೆ ಬಾಗಿಲಿಗೇ ಬಂತು ಕಸ! ಕಠಿಣ ಕಾನೂನು ಕ್ರಮದ ಎಚ್ಚರಿಕೆ
ಕೇವಲ ದಂಡ ವಿಧಿಸುವುದಷ್ಟೇ ಅಲ್ಲದೆ, ಸಾರ್ವಜನಿಕ ಸ್ಥಳವನ್ನು ಕೊಳಕು ಮಾಡಿದವರಿಗೆ ಬುದ್ಧಿ ಕಲಿಸಲು ಅವರು ರಸ್ತೆಗೆ ಚೆಲ್ಲಿದ್ದ ಕಸವನ್ನೇ ಅವರ ಮನೆ ಬಾಗಿಲಿಗೆ ತಂದು ಹಾಕುವ ಮೂಲಕ ಅಧಿಕಾರಿಗಳು ವಿನೂತನವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಇನ್ನು ಮುಂದೆ ಮತ್ತೆ ಇಂತಹ ತಪ್ಪು ಎಸಗಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಪಾಲಿಕೆ ಅಧಿಕಾರಿಗಳು

✨ ಕಪ್ಪು ಚುಕ್ಕೆ (Black Spot) ಮುಕ್ತ ಮುಕ್ತ: ರಂಗೋಲಿ ಇಟ್ಟು ಅಂದಗೊಳಿಸಿದ ಸಿಬ್ಬಂದಿ
ಇದೇ ಸಂದರ್ಭದಲ್ಲಿ ವಾರ್ಡ್ ನಂ 7 ರ ಮಣಕಿಲ್ಲ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರು ಸದಾ ಕಸ ಹಾಕುತ್ತಿದ್ದ ಕಪ್ಪು ಚುಕ್ಕೆ (Black Spot) ಪ್ರದೇಶವನ್ನು ಪಾಲಿಕೆ ಸಿಬ್ಬಂದಿ ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ಕಸ ಮುಕ್ತಗೊಳಿಸಿದ ಆ ಜಾಗದಲ್ಲಿ ಸಾರ್ವಜನಿಕರು ಮತ್ತೆ ಕಸ ಹಾಕದಂತೆ ಸುಂದರವಾದ ರಂಗೋಲಿ ಬಿಡಿಸಿ, ಆ ಪ್ರದೇಶವನ್ನು ಅಂದಗೊಳಿಸಲಾಯಿತು.

💡 ಸಾರ್ವಜನಿಕರಲ್ಲಿ ವಿನಂತಿ: ನಗರದ ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿ. ಪಾಲಿಕೆ ವಾಹನಗಳಿಗೆ ಮಾತ್ರ ಕಸ ನೀಡಿ. ಎಲ್ಲೆಂದರಲ್ಲಿ ಕಸ ಎಸೆದು ದಂಡ ಹಾಗೂ ಕಾನೂನು ಕ್ರಮಕ್ಕೆ ಒಳಗಾಗಬೇಡಿ.
ಈ ಯಶಸ್ವಿ ಕಾರ್ಯಾಚರಣೆಯ ಸಮಯದಲ್ಲಿ ಸಮುದಾಯ ಸಂಚಾಲಕರು, ಜಮಾದಾರರಾದ ಅಶೋಕ, ನರಸಿಂಹ, ತಿಮ್ಮಣ್ಣ, ದಯಾನಂದ ಮತ್ತು ಹಣಮಂತ ಹಾಗೂ ವಿಕ್ರಮ್ ವಾಹನದ ಚಾಲಕರಾದ ಉಮೇಶ ಸೇರಿದಂತೆ ಪಾಲಿಕೆಯ ಇತರೆ ಸಿಬ್ಬಂದಿಗಳು ಹಾಜರಿದ್ದರು. ಅಧಿಕಾರಿಗಳ ಈ ಖಡಕ್ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

M R ದಖನಿ

Related Articles

Leave a Reply

Your email address will not be published. Required fields are marked *