BREAKING NEWSCITY CRIME NEWSDHARWADTWINCITY

ಆ “ಹಿರಿಯ ಪತ್ರಕರ್ತ”ವಿಧ್ಯಾರ್ಥಿಗಳ ಪಾಲಿಗೆ ಆಶ್ರಯದಾತ!

POWER CITY

POWER CITYNEWS:HUBBALLI /ಧಾರವಾಡ: ವಿದ್ಯಾಕಾಶಿ ಹುಬ್ಬಳ್ಳಿ -ಧಾರವಾಡ ನಗರಗಳಿಗೆ ವಿದ್ಯಾಭ್ಯಾಸಕ್ಕಾಗಿ ಆಗಮಿಸುವ ಮುಸ್ಲಿಂ ಸಮುದಾಯದ ಕಾಲೇಜು ವಿದ್ಯಾರ್ಥಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಧಾರವಾಡ ಶಹರದಲ್ಲಿ ಸಂಪೂರ್ಣ ಉಚಿತ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸುವ ವ್ಯವಸ್ಥೆಯನ್ನು ಧಾರವಾಡ ಭಾಗದ ಹಿರಿಯ ಪತ್ರಕರ್ತರೊಬ್ಬರ ಸುವಿಚಾರದಲ್ಲಿ ನಡೆಯುತ್ತಿದೆ.

ಮೂಲತಃ ಧಾರವಾಡ ತಾಲೂಕಿನ ನವಲಗುಂದ ಪಟ್ಟಣದವರಾದ ಸಾಮಾಜಿಕ ಚಿಂತಕರು ಹಾಗೂ ಹಿರಿಯ ಪತ್ರಕರ್ತರು ಆದ ಮುಸ್ತಫಾ ಕುನ್ನಿಭಾವಿ ಅವರು ಈ ಶ್ಲಾಘನೀಯ ಕಾರ್ಯಕ್ಕೆ ಮುಂದಾಗಿದ್ದು, ಶಿಕ್ಷಣವೇ ಶಕ್ತಿ, ಜ್ಞಾನವೇ ಪ್ರಗತಿ ಎಂಬ ಧ್ಯೇಯದೊಂದಿಗೆ ವಿದ್ಯಾರ್ಥಿಗಳಿಗೆ ನೆರವಾಗಲು ಈ ಉತ್ತಮ ಹೆಜ್ಜೆಯನ್ನು ಇಟ್ಟಿದ್ದಾರೆ.

ಹಾಸ್ಟೆಲ್‌ನಲ್ಲಿ ಏನೆಲ್ಲಾ ಸೌಲಭ್ಯಗಳಿವೆ?
ಗ್ರಾಮೀಣ ಹಾಗೂ ಹೊರಭಾಗಗಳಿಂದ ಬರುವ ಕಾಲೇಜು ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಈ ಕೆಳಗಿನ ಪ್ರಮುಖ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ:

ಉಚಿತ ಊಟ ಮತ್ತು ವಸತಿ:* ವಿದ್ಯಾರ್ಥಿಗಳಿಗೆ ತಂಗಲು ಉತ್ತಮ ವಸತಿ ಹಾಗೂ ಗುಣಮಟ್ಟದ ಆಹಾರದ ವ್ಯವಸ್ಥೆ ಇರಲಿದೆ.

ಸುರಕ್ಷತೆ ಮತ್ತು ಭದ್ರತೆ: ವಿದ್ಯಾರ್ಥಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಸುರಕ್ಷಿತ ವಾತಾವರಣವನ್ನು ಕಲ್ಪಿಸಲಾಗಿದೆ.

ಲಾಭ ಪಡೆದುಕೊಳ್ಳಲು ಕರೆ
“ಶಿಕ್ಷಣ ನಿಮ್ಮ ಹಕ್ಕು… ಬದುಕನ್ನು ಬೆಳಗಿರಿ..!” ಎಂಬ ಕರೆ ನೀಡಿರುವ ಮುಸ್ತಫಾ ಕುನ್ನಿಭಾವಿ ಅವರು, ಹುಬ್ಬಳ್ಳಿ-ಧಾರವಾಡದ ವಿವಿಧ ಕಾಲೇಜುಗಳಿಗೆ ಪ್ರವೇಶ ಪಡೆಯುವ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಈ ಸುವರ್ಣ ಅವಕಾಶವನ್ನು ತಪ್ಪದೇ ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ಸಂಪರ್ಕ ಮಾಹಿತಿ:
ಹಾಸ್ಟೆಲ್ ಪ್ರವೇಶಾತಿ ಹಾಗೂ ಹೆಚ್ಚಿನ ವಿವರಗಳಿಗಾಗಿ ವಿದ್ಯಾರ್ಥಿಗಳು ಅಥವಾ ಪೋಷಕರು ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ:

ಮೊಬೈಲ್ ಸಂಖ್ಯೆ:* 8861478786

Related Articles

Leave a Reply

Your email address will not be published. Required fields are marked *