ಧಾರವಾಡ

ಶಿಕ್ಷಕಿ ವರ್ಗಾವಣೆಗೆ ವಿದ್ಯಾರ್ಥಿನೀಯರ ಕಣ್ಣೀರು

ಧಾರವಾಡ

ಗುರು ಶಿಷ್ಯರ ಸಂಬಂಧವೇ ಹೀಗೆ. ವಿದ್ಯೆ ಕಲಿಸಿದ ಗುರುವಿಗೆ ಶಿಷ್ಯಂದೀರು ತೋರುವ ಪ್ರೀತಿ ಬೆಲೆ ಕಟ್ಟಲಾಗದಿರುವಂತಹದ್ದು.

ಇಂತಹ ಒಂದು ಗುರು ಶಿಷ್ಯರ ಅವಿನಾಭಾವದ ಸಂಬಂಧಕ್ಕೆ ಸಾಕ್ಷಿಯಾಗಿದ್ದು ಧಾರವಾಡ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆ.‌

ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿನ ಸರ್ಕಾರಿ ಶಾಲೆ ಸಹ ಶಿಕ್ಷಕಿ
ಶಿವಲೀಲಾ ಶಿವಾನಂದ ನಾಗೂರ ವರ್ಗಾವಣೆ ಆಗಿದ್ದು, ಇವರ ವರ್ಗಾವಣೆಗೆ ವಿದ್ಯಾರ್ಥಿನೀಯರು ಕಣ್ಣೀರು ಹಾಕುತ್ತಿದ್ದಾರೆ.

ಬ್ಯಾಹಟ್ಟಿ ಊರಿನ ಸರಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ಹನ್ನೆರಡು ವರ್ಷ ಸೇವೆ ಸಲ್ಲಿಸಿ, ಈಗ ಧಾರವಾಡ ತಾಲೂಕಿನ ನಿಗದಿ ಸರಕಾರಿ ಪ್ರಾಥಮಿಕ ಶಾಲೆಗೆ ಈ ಶಿಕ್ಷಕಿಯ ವರ್ಗಾವಣೆಯಾಗಿದೆ.

ತಮ್ಮ ಪೋಷಕರು ತೋರುವ ಪ್ರೀತಿಗಿಂತ ಜಾಸ್ತಿಯಾಗಿ ಈ ಶಿಕ್ಷಕಿ ವಿದ್ಯಾರ್ಥಿನೀಯರ ಮೇಲೆ ತೋರಿಸ್ತಾ ಇದ್ದರು. ಹೀಗಾಗಿ ಅಷ್ಟೊಂದು ಅಕ್ಕರೆ ಇದೆ ಶಿಕ್ಷಕಿ ಮೇಲೆ ಇಲ್ಲಿನ ವಿದ್ಯಾರ್ಥಿನೀಯರಿಗೆ.

ಕೂಡಲೇ ಈ ಬಗ್ಗೆ ಡಿಡಿಪಿಐ ಹಾಗೂ ಬಿಇಓಗಳು ವಿದ್ಯಾರ್ಥಿನೀಯರ ಬೇಡಿಕೆಗೆ ಸ್ಪಂದಿಸುವ ಕೆಲಸ ಮಾಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button