Jannah Theme License is not validated, Go to the theme options page to validate the license, You need a single license for each domain name.
BREAKING NEWSCITY CRIME NEWSDHARWADPolice

ಅತ್ಯಾಚಾರಿ ಆರೋಪಿಯ ಬಂಧನ!

Accused arrest.

POWER CITYNEWS :HUBBALLI

ಹುಬ್ಬಳ್ಳಿ: ಅತ್ಯಾಚಾರದ ಆರೋಪಿ ಎನ್ನಲಾದ ಮುಫ್ತಿ ಗುಲಾಮ ಜಿಲಾನಿ ಅಜಾರಿ ಎಂಬಾತನನ್ನು ಹೆಡೆಮುರಿಕಟ್ಟಿ ಆತನೊಂದಿಗೆ ಇದ್ದ ಮತ್ತೊಬ್ಬನನ್ನು ಹಳೇ ಹುಬ್ಬಳ್ಳಿ ಪೊಲೀಸರು ಬಂದಿಸಿದ್ದಾರೆ.
ಅತ್ಯಾಚಾರದ ಆರೋಪದ ಮೇಲೆ ಬಂಧಿತನಾಗಿರುವ, ಮುಫ್ತಿ ಗುಲಾಮ ಜಿಲಾನಿ ಅಜಹರಿಯನ್ನು ಹಳೇ ಹುಬ್ಬಳ್ಳಿ ಪೊಲೀಸ ಠಾಣೆಗೆ ಕರೆತರಲಾಗಿದೆ. ಮಧ್ಯಪ್ರದೇಶದ. ಖಂಡವಾದಲ್ಲಿ ತಲೆಮರೆಸಿಕೊಂಡಿದ್ ಆರೋಪಿಯನ್ನು ಬಿಗಿ ಪೊಲಿಸ್ ಭದ್ರತೆಯಲ್ಲಿ ಠಾಣೆಗೆ ಇಂದು ಕರೆತಂದು ವಿಚಾರಣೆ ನಡೆಸಿದ್ದಾರೆ.

ಹುಬ್ಬಳ್ಳಿಯ ಮೂಲದ ಯುವತಿಯೋರ್ವಳನ್ನು ಫುಸಲಾಯಿಸಿದ್ದಲ್ಲದೆ ಮಫ್ತಿ ತಾನಿರುವ ಕೋಠಡಿಗೆ ಯುವತಿಯನ್ನ ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಬಂದು ಪದಾರ್ಥ ಒಂದರಲ್ಲಿ ಮತ್ತೂಬರುವ ಮಾತ್ರೆ ಕೊಟ್ಟು ನಂತರ ಆಕೆಯ ಮೇಲೆ ಅತ್ಯಚಾರ ಎಸಗಿರುವ ಆರೋಪ ಮುಫ್ತಿ ಜೆಲಾನಿ ಮೇಲಿದೆ.

ಮುಫ್ತಿಯ ಹೇಯ ಕೃತ್ಯಕ್ಕೆ ಸಹಕರಿಸಿದ್ದಾನೆ ಎಂಬ ಮತ್ತೊರ್ವ ವ್ಯಕ್ತಿಯನ್ನು ಸಹ ಬಂಧಿಸಿರು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.ನಂತರ ಮಪ್ತೀಯನ್ನು ಪ್ರಥಮ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ನ್ಯಾಯಾಧಿಶರ ಎದುರು ಹಾಜರ ಪಡಿಸಲಾಗುತ್ತದೆ.
ನ್ಯಾಯಾಲಯಕ್ಕೆ ಹಾಜರು ಪಡಿಸಿದ ಬಳಿಕ ಮಫ್ತಿ ಗುಲಾಮ ಜಿಲಾನಿ ಅಜಾರಿಯನ್ನು ಹೆಚ್ಚಿನ ವಿಚಾರಣೆಗಾಗಿ ಹಳೆಹುಬ್ಬಳ್ಳಿ ಪೊಲೀಸರು ಕಸ್ಟಡಿಗೆ ಪಡೆಯುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆದರೆ ಆತನಿಂದ ಮತ್ತಷ್ಟು ಸ್ಪೋಟಕ ವಿಷಯಗಳು ಬಯಲಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *