BREAKING NEWSCITY CRIME NEWSDHARWADHubballiಸ್ಥಳೀಯ ಸುದ್ದಿ

ಅಪಘಾತಕ್ಕೆ “ಹಾಟ್‌ಸ್ಪಾಟ್ ಸೃಷ್ಟಿಸಿದ” ಕೆಟ್ಟು ನಿಂತ ವಾಹನಗಳು!

Accident spot

POWERCITY NEWS : HUBBALLI

ಹುಬ್ಬಳ್ಳಿ

ಅವಳಿನಗರದ ಕೆಲವೆಡೆ ಸಾರ್ವಜನಿಕ ಸಂಚಾರಿ ರಸ್ತೆಯ ಬದಿಯಲ್ಲಿ ಮನಸ್ಸೊ ಇಚ್ಛೆ ವಾಹನಗಳನ್ನು ನಿಲ್ಲಿಸುತ್ತಿದ್ದು ಇದರಿಂದ ಸಾರ್ವಜನಿಕ ಸಂಚಾರಿ ವಾಹನಗಳು ಅಪಘಾತಕ್ಕಿಡಾಗುತ್ತಿವೆ.
ಇಂದು ಮುಂಜಾನೆ 7:30ರ ವೇಳೆಗೆ ಶಾಡೋಜ್ ಜಿಮ್ ವ್ಯವಸ್ಥಾಪಕ ಸಚಿನ್ ಎಂಬುವವರು ವ್ಯಾಯಾಮ ಮುಗಿಸಿ ದ್ವಿಚಕ್ರ ವಾಹನದ ಮೂಲಕ ಮನೆಯತ್ತ ಸಾಗಲು ಬರುವ ವೇಳೆಗೆ ಮುಖ್ಯ ರಸ್ತೆಯ ತಿರುವಿನಲ್ಲಿ ಅಡ್ಡಲಾಗಿ ನಿಂತ ವಾಹನಗಳ ಪರಿಣಾಮ ಎದುರಿಗೆ ಬರುವ ಕಾರು ಕಾಣದೆ ಮುಂದೆ ಸಾಗಿದ್ದಾರೆ. ಇದರಿಂದ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ ತೀವ್ರ ವಾಗಿ ಗಾಯಗೊಂಡ ಜಿಮ್ ಮ್ಯಾನೆಜರ್ ಸಚಿನ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ಥಿತಿ ಚಿಂತಾಜನಕವಾಗಿದೆ.

ಇನ್ನೂ ಸಂಚಾರಿ ಪೊಲೀಸ ಅಧಿಕಾರಿಗಳು ಇತ್ತ ಗಮನ ಹರಿಸದಿರುವುದಕ್ಕೆ ಸಾರ್ವಜನಿಕರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಶಿರೂರ ಪಾರ್ಕ ವೃತ್ತದಿಂದ ತೊಳನಕೆರೆ ಮಾರ್ಗ ಮಧ್ಯದ “ರಿಲಾಯನ್ಸ್ ಮೋರ್” ಎದುರುಗಡೆಯ ರಸ್ತೆಯ ಪಕ್ಕದಲ್ಲಿ ಬೆಕಾ ಬಿಟ್ಟಿ ವಾಹನಗಳನ್ನು ಪಾರ್ಕ್ ಮಾಡಿದ್ದಾರೆ. ಇದರಿಂದ ಇ ಭಾಗದಲ್ಲಿ ಸಂಚಾರಿ ವಾಹನಗಳ ದಟ್ಟನೆಯು ಕೂಡ ಹೆಚ್ಚಾಗಿದ್ದು. ರಸ್ತೆಗೆ ಅಡ್ಡಲಾಗಿ ನಿಂತು ಅಪಘಾತದ ಹಾಟ್‌ಸ್ಪಾಟ್ ಆಗಿರುವ ಇಲ್ಲಿನ ಪರಿಸ್ಥಿತಿಗೆ ಪೊಲೀಸ್ ಇಲಾಖೆಯ ಕ್ರಮವೆನು ಕಾದು ನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button