Jannah Theme License is not validated, Go to the theme options page to validate the license, You need a single license for each domain name.
ಸ್ಥಳೀಯ ಸುದ್ದಿ

ಸವದತ್ತಿ ಶಾಸಕನಿಗೆ ಸನ್ಮಾನಿಸಿ ಗೌರವಿಸಿದ ಕಿಟೆಲ್ ಪದವಿ ಕಾಲೇಜಿನ ಪ್ರಾಧ್ಯಾಪಕ ವೃಂದ

ಧಾರವಾಡ

ಶಾಸಕರಾಗಿ ಆಯ್ಕೆಯಾದ ಸವದತ್ತಿ ತಾಲೂಕಿನ ವಿಶ್ವಾಸ ವೈದ್ಯ ಅವರಿಗೆ‌ ಕಿಟೆಲ್ ಪದವಿ ಕಾಲೇಜಿನ ಪ್ರಾಧ್ಯಾಪಕ ವೃಂದದವರು ಸನ್ಮಾನಿಸಿ ಗೌರವಿಸಿದರು.

ಧಾರವಾಡಕ್ಕೆ ಆಗಮಿಸಿದ್ದ ಸವದತ್ತಿ ತಾಲೂಕಿನ‌ ಶಾಸಕ ವಿಶ್ವಾಸ ವೈದ್ಯ
ಕಿಟೆಲ್ ಕಾಲೇಜಿನ ಹಳೆಯ ವಿದ್ಯಾರ್ಥಿ ಕೂಡ ಹೌದು.

ವಿಶ್ವಾಸ ವೈದ್ಯ ಅವರು ಕಾಲೇಜಿನ ಶಿಷ್ಯವೃಂದಕ್ಕೆ ಗೌರವ ಸಲ್ಲಿಸಿ, ತಮ್ಮ ಏಳ್ಗೆ ಹಾಗೂ ಜೀವನದಲ್ಲಿ ಮಹತ್ವದ ಸ್ಥಾನ ಪಡೆಯಲು, ಶಿಸ್ತುಬದ್ಧ ಕಾಲೇಜಿನ ಶಿಕ್ಷಣ ಪ್ರಮುಖ ಪಾತ್ರ ವಹಿಸಿದೆ ಎಂದರು.

ಈ ಸಂದರ್ಭದಲ್ಲಿ ಕಿಟೆಲ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಜೋಗುಳ, ಡಾ.ಸುರೇಶ ನ್ಯಾಮತಿ, ಡಾ.ವಿ.ಆಯ್ ಶೇಖ, ಫ್ರೋ. ಡ್ಯಾನಿಯಲ್ ಪ್ರವೀಣಕುಮಾರ, ಹಾಗೂ ಇತರು ಪ್ರಾಧ್ಯಾಪಕ ವೃಂದ ಮತ್ತು ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದು, ಸನ್ಮಾನಿಸಿದ್ರು..

Related Articles

Leave a Reply

Your email address will not be published. Required fields are marked *