Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಇಂದಿನಿಂದ ಹೊಸ ಡಿಸಿಪಿ‌ ಸಾಹಿಲ್ ಅವರ ಲಾ ಆ್ಯಂಡ್ ಆರ್ಡರ್ ಶುರು

ಧಾರವಾಡ

ಹುಬ್ಬಳ್ಳಿ ‌ಧಾರವಾಡ ಪೊಲೀಸ್ ಕಮೀಶನರೇಟ್ ವಿಭಾಗದ ಕಾನೂನು‌ ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರಾಮಾನುಜನ್ ಅವರನ್ನು ಬೆಂಗಳೂರಿಗೆ ವರ್ಗ ಮಾಡಿ ರಾಜ್ಯ‌ ಸರ್ಕಾರ ಆದೇಶ ಮಾಡಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವರ್ಗವಾದ ಡಿಸಿಪಿ ರಾಮಾನುಜನ್ ಅವರಿಗೆ ಬಿಳ್ಕೋಡುಗೆ ಕಾರ್ಯಕ್ರಮ ನಡೆಯಿತು.

ಪೊಲೀಸ್ ಆಯುಕ್ತ ಲಾಬೂರಾಮ್ ಹಾಗೂ ಡಿಸಿ ನಿತೇಶ ಪಾಟೀಲ ಅವರು ಡಿಸಿಪಿ ರಾಮಾನುಜನ್ ಅವರಿಗೆ ಅತ್ಯಂತ ಖುಷಿಯಿಂದ ಹಾಗೂ ಅವರು ಮಾಡಿರುವ ಕೆಲಸಗಳನ್ನು ನೆನಪಿಸಿಕೊಂಡು ಜಿಲ್ಲೆಯಿಂದ ಬಿಳ್ಕೋಟ್ಟರು.

ಅವರ ಜಾಗಕ್ಕೆ ರಾಜ್ಯ ಸರ್ಕಾರ ಸಾಹಿಲ್ ಬಗ್ಲಾ ಅವರನ್ನು‌ ನೇಮಕ ಮಾಡಿದ ಹಿನ್ನೆಲೆಯಲ್ಲಿ ಇಂದೇ ಹೊಸ ಡಿಸಿಪಿಯಾಗಿ ಸಾಹಿಲ್ ಅವರು ಅಧಿಕಾರ ವಹಸಿಕೊಂಡರು. ಪೊಲೀಸ್ ಆಯುಕ್ತ ಲಾಬೂರಾಮ್ ಅವರು ಹುಬ್ಬಳ್ಳಿ ಧಾರವಾಡ ಕಮೀಶನರೇಟ್ ವಿಭಾಗಕ್ಕೆ ಅವರಿಗೆ ಸ್ವಾಗತ ಕೋರಿದ್ರು.‌

ಸಾಹಿಲ್ ಬಗ್ಲಾ ಅವರು ಈ ಹಿಂದೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಉಪವಿಭಾಗದ ಎಎಸ್ಪಿಯಾಗಿ‌ ಕೆಲಸ ಮಾಡುತ್ತಿದ್ದರು.

ಅವರನ್ನು ನೇರವಾಗಿ ಬೆಂಗಳೂರು ಸಿಐಡಿ‌ ಎಎಸ್ಪಿಯಾಗಿ ನೇಮಕ‌ ಮಾಡಿ ಹೆಚ್ಚವರಿ ಹೊಣೆಯನ್ನು ಧಾರವಾಡದ ಪೊಲೀಸ್ ಕಮೀಶನರೇಟ್ ವಿಭಾಗಕ್ಕೆ‌ ಡಿಸಿಪಿಯಾಗಿ ( law & order) ಅಧಿಕಾರ ವಹಿಸಲಾಗಿದೆ.

Related Articles

Leave a Reply

Your email address will not be published. Required fields are marked *